Asianet Suvarna News Asianet Suvarna News

ಭಾರತೀಯರ ಅದೃಷ್ಟದ ಬಾಗಿಲು ತೆರೆದ ರಾಫೆಲ್ ಡ್ರಾ..!

ಕೇರಳ ನಿವಾಸಿಯಾಗಿರುವ ಸಜುಶ್ ಸಾಂಬಶಿವನ್ ಈ ವಾರದ ಸ್ಟಾರ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮಾರ್ಚ್ 29ರ ಫಾರ್ಚೂನ್ 5ನಲ್ಲಿ ಅವರು ಖರೀದಿಸಿದ ಲಾಟರಿ ನಂಬರ್ ಮ್ಯಾಚ್ ಆಗಿದ್ದು, 1,00,000 AED(ಅರಬ್ ಎಮಿರಾಟ್ಸ್ ಧಿರ್) ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ಸುಮಾರು 22.5 ಲಕ್ಷ ರುಪಾಯಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

Raffle Draws Make Dreams a Reality for Multiple Winners Across India kvn
Author
First Published Apr 2, 2024, 7:46 PM IST

ಬೆಂಗಳೂರು(ಏ.02): ಈ ವಾರದ ಗಲ್ಪ್ ಟಿಕೆಟ್‌ನಲ್ಲಿ ಭಾರತದ ನಿವಾಸಿಗಳಿಗೆ ಅದೃಷ್ಟ ಖುಲಾಯಿಸಿದೆ. ಇದೀಗ ಜನಪ್ರಿಯ ಎಂಟರ್‌ಟೈನ್‌ಮೆಂಟ್ ಒಳಗೊಂಡ ಫಾರ್ಚೂನ್ 5 ಹಾಗೂ ಸೂಪರ್ 6 ಡ್ರಾ ಫಲಿತಾಂಶ ಪ್ರಕಟಗೊಂಡಿದ್ದು, ಹಲವು ಭಾರತೀಯರ ಭವಿಷ್ಯ ಇದರಿಂದ ಬದಲಾಗಿದೆ. 

ಕೇರಳ ನಿವಾಸಿಯಾಗಿರುವ ಸಜುಶ್ ಸಾಂಬಶಿವನ್ ಈ ವಾರದ ಸ್ಟಾರ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮಾರ್ಚ್ 29ರ ಫಾರ್ಚೂನ್ 5ನಲ್ಲಿ ಅವರು ಖರೀದಿಸಿದ ಲಾಟರಿ ನಂಬರ್ ಮ್ಯಾಚ್ ಆಗಿದ್ದು, 1,00,000 AED(ಅರಬ್ ಎಮಿರಾಟ್ಸ್ ಧಿರ್) ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ಸುಮಾರು 22.5 ಲಕ್ಷ ರುಪಾಯಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಶಿವಮೊಗ್ಗದ ರಹೀಮ್ ಸೇರಿ ಮೂವರಿಗೆ ಜಾಕ್‌ಪಾಟ್, ಗಲ್ಫ್ ಟಿಕೆಟ್ ಡ್ರಾದಲ್ಲಿ 22.5 ಲಕ್ಷ ರೂ ಬಹುಮಾನ!

ಇನ್ನು ಈ ಗೆಲುವಿನ ನಾಗಾಲೋಟ ಮರುದಿನವೂ ಮುಂದುವರೆದಿದೆ. ಅಂದರೆ ಮಾರ್ಚ್ 30ರಂದು ನಡೆದ ಸೂಪರ್ 6 ಡ್ರಾನಲ್ಲಿ ಮುಂಬೈನ ಸಿಮಂತ ಹಜಾರಿಕಾ, ಹೈದರಾಬಾದ್ ಮೂಲದ ಮಲ್ಲೇಶ್ ಖಂಡೋಲಾ ಹಾಗೂ ಕರ್ನಾಟಕದ ಫೈಜುಲ್ AED 50,000(11.25 ಲಕ್ಷ ರುಪಾಯಿ) ತನ್ನದಾಗಿಸಿಕೊಂಡಿದ್ದಾರೆ.  ಇನ್ನು ಕಳೆದ ವಾರದ ರಾಫೆಲ್ ಡ್ರಾನಲ್ಲಿ 8 ಮಂದಿ ಅದೃಷ್ಟಶಾಲಿಗಳು AED 5,000 (₹1.12 ಲಕ್ಷ ರುಪಾಯಿ) ಬಹುಮಾನ ಜೇಬಿಗಿಳಿಸಿಕೊಂಡಿದ್ದಾರೆ.  

ವಿಜೇತರ ವೈವಿಧ್ಯತೆ ಮತ್ತು ಅವರ ಗೆಲುವುಗಳ ಸಂಪೂರ್ಣ ಪ್ರಮಾಣವು ಜೀವನದ ಎಲ್ಲಾ ಹಂತಗಳ ಆಟಗಾರರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಗಲ್ಫ್ ಟಿಕೆಟ್‌ನ ಬದ್ಧತೆಯನ್ನು ಒತ್ತಿಹೇಳುತ್ತದೆ. ಪ್ರತಿಯೊಂದು ಗೆಲುವು ಭರವಸೆ, ನಿರೀಕ್ಷೆ ಮತ್ತು ಅಂತಿಮವಾಗಿ ವಿಜಯದ ವಿಶಿಷ್ಟ ಕಥೆಯನ್ನು ಪ್ರತಿನಿಧಿಸುತ್ತದೆ ಮತ್ತು ಆ ಪ್ರಯಾಣದ ಭಾಗವಾಗಲು ನಾವು ರೋಮಾಂಚನಗೊಂಡಿದ್ದೇವೆ ಎಂದು ಗಲ್ಫ್ ಟಿಕೆಟ್‌ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಜೋರನ್ ಪೋಪೋವಿಕ್ ಹೇಳಿದ್ದಾರೆ.

ಗಲ್ಫ್ ಟಿಕೆಟ್ ಬಗ್ಗೆ: 

ಗಲ್ಫ್ ಟಿಕೆಟ್ ಪ್ರತಿ ವಾರ ನಡೆಯಲಿರುವ ವಿವಿಧ ರೀತಿಯ ಲಾಟರಿಯಾಗಿದೆ. ಇದು ಬದುಕು ಬದಲಿಸಿಕೊಳ್ಳಲು ಮುಕ್ತ ಅವಕಾಶವನ್ನು ಮಾಡಿಕೊಟ್ಟಿದೆ. ಪ್ರತಿವಾರ ಲಕ್ಷಾಂತರ ರುಪಾಯಿ ಮೊತ್ತದ ದಿರಾಮ್‌ಗಳನ್ನು ಗಳಿಸಿಕೊಳ್ಳಲು ಅವಕಾಶವಿದೆ. ಗಲ್ಫ್ ಟಿಕೆಟ್ ಆಸಕ್ತರು ಬದುಕು ಬದಲಿಸಿಕೊಳ್ಳಲು ಒಂದು ವೇದಿಕೆಯ ರೂಪದಲ್ಲಿ ಕೆಲಸ ಮಾಡುತ್ತಿದೆ.
 

Follow Us:
Download App:
  • android
  • ios