24 ವರ್ಷದ ಶುಭಂ ಬೆಳಗ್ಗೆ 9.30ರ ವೇಳೆಗೆ ಕಚೇರಿಗೆ ಬಂದಾಗಲೇ ಎದೆನೋವು ಕಾಣಿಸಿಕೊಂಡಿತ್ತು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಶುಭಂ ಎಂದಿನಂತೆ ಶೋ ನಡೆಸಲು ತೆರಳಿದ್ದಾರೆ. ಬಳಿಕ ಕಾರ್ಯಕ್ರಮದ ನಡುವಿನ ವಿರಾಮದ ಸಮಯದಲ್ಲಿ ಹೊರಬಂಧ ಶುಭಂ ಬಾತ್'ರೂಂಗೆ ತೆರಳಿದ್ದರು. ಆದರೆ ಅಲ್ಲಿ ಮತ್ತೆ ಎದೆ ನೋವು ಉಲ್ಭಣಿಸಿದೆ. ಹೀಗಾಗಿ ನೆರವಿಗಾಗಿ ಕೂಗಿಕೊಂಡಿದ್ದಾರೆ. ದುರಾದೃಷ್ಟವಶಾತ್ ಕಚೇರಿಯ ಭದ್ರತಾ ಸಿಬ್ಬಂದಿ ಬಂದು ನೋಡುವಷ್ಟರಲ್ಲಿ ಶುಭಂ ಹೃದಯ ಬಡಿತ ನಿಂತಿತ್ತು.
ನಾಗ್ಪುರ(ಅ.24): ರೇಡಿಯೋ ಮಿರ್ಚಿಯ 'ಹಾಯ್ ನಾಗ್ಪುರ' ಶೋ ನಡೆಸುತ್ತಿದ್ದ ಆರ್'ಜೆ ಶುಭಂ ಸಾವಿನ ಸುದ್ದಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಶೋ ನಡೆಯುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಇವರು ಮೃತಪಟ್ಟಿರುವುದು ಅಭಿಮಾನಿಗಳ ಕಣ್ಣಲ್ಲಿ ಕಂಬನಿ ಮಿಡಿಸುವಂತೆ ಮಾಡಿದೆ. ಆದರೆ ಶುಭಂ ಸಾವಿಗೆ ಅವರ ನಿರ್ಲಕ್ಷ್ಯವೇ ಕಾರಣವಾಯಿತಾ ಎಂಬ ಮಾತುಗಳು ಇದೀಗ ಕೇಳಿ ಬಂದಿವೆ.
24 ವರ್ಷದ ಶುಭಂ ಬೆಳಗ್ಗೆ 9.30ರ ವೇಳೆಗೆ ಕಚೇರಿಗೆ ಬಂದಾಗಲೇ ಎದೆನೋವು ಕಾಣಿಸಿಕೊಂಡಿತ್ತು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಶುಭಂ ಎಂದಿನಂತೆ ಶೋ ನಡೆಸಲು ತೆರಳಿದ್ದಾರೆ. ಬಳಿಕ ಕಾರ್ಯಕ್ರಮದ ನಡುವಿನ ವಿರಾಮದ ಸಮಯದಲ್ಲಿ ಹೊರಬಂಧ ಶುಭಂ ಬಾತ್'ರೂಂಗೆ ತೆರಳಿದ್ದರು. ಆದರೆ ಅಲ್ಲಿ ಮತ್ತೆ ಎದೆ ನೋವು ಉಲ್ಭಣಿಸಿದೆ. ಹೀಗಾಗಿ ನೆರವಿಗಾಗಿ ಕೂಗಿಕೊಂಡಿದ್ದಾರೆ. ದುರಾದೃಷ್ಟವಶಾತ್ ಕಚೇರಿಯ ಭದ್ರತಾ ಸಿಬ್ಬಂದಿ ಬಂದು ನೋಡುವಷ್ಟರಲ್ಲಿ ಶುಭಂ ಹೃದಯ ಬಡಿತ ನಿಂತಿತ್ತು.
ಆ ಕೂಡಲೇ ಶುಭಂರನ್ನು ಉಳಿಸಿಕೊಳ್ಳುವ ಸಲುವಾಗಿ ಸಮೀಪದ ಹೈಟೆಕ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತಾಗಿ ಮಾತನಾಡಿದ ಡಾ. ಸಂಜಯ್ ಕೃಪಲಾನಿ 'ಮೊದಲ ಬಾರಿ ಎದೆ ನೋವು ಕಾಣಿಸಿಕೊಂಡಾಗಲೇ ಶುಭಂ ಚಿಕಿತ್ಸೆ ಪಡೆದಿದ್ದರೆ ಪ್ರಾಣ ಉಳಿಯುವ ಸಾಧ್ಯತೆ ಇತ್ತು. ಶುಭಂ ಪ್ರಾಣ ಹೋಗಿ 15 ನಿಮಿಷಗಳಾದ ಬಳಿಕ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ' ಎಂದಿದ್ದಾರೆ.