ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದು ಕೃಷಿ ಸಚಿವ ರಾಧಾ ಮೋಹನ್'ಗೆ ತಾತ್ಕಾಲಿಕವಾಗಿ ಗ್ರಾಹಕ ವ್ಯವಹಾರಗಳ ಖಾತೆಯನ್ನು ವಹಿಸಲಾಗಿದೆ.

ನವದೆಹಲಿ (ಮೇ.21): ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದು ಕೃಷಿ ಸಚಿವ ರಾಧಾ ಮೋಹನ್ ಗೆ ತಾತ್ಕಾಲಿಕವಾಗಿ ಗ್ರಾಹಕ ವ್ಯವಹಾರಗಳ ಖಾತೆಯನ್ನು ವಹಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಮ್ ವಿಲಾಸ್ ಪಾಸ್ವಾನ್ ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಇದಕ್ಕೂ ಮೊದಲು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಹೆಚ್ಚುವರಿ ಚಿಕಿತ್ಸೆಗೆ ಲಂಡನ್’ಗೆ ತೆರಳಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್ ಅನಾರೋಗ್ಯ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಖಾತೆಯನ್ನು ರಾಧಾಮೋಹನ್ ಗೆ ಹೆಚ್ಚುವರಿಯಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಹಿಸಿದ್ದಾರೆ. ರಾಮ್ ವಿಲಾಸ್ ಸಂಪೂರ್ಣ ಚೇತರಿಸಿಕೊಂಡು ಹಿಂತಿರುಗುವವರೆಗೆ ಇವರೇ ಆ ಖಾತೆಯನ್ನು ನಿಭಾಯಿಸಲಿದ್ದಾರೆ.

ಜೂ.14 ರವರೆಗೆ ಪಾಸ್ವಾನ್’ಗೆ ಲಂಡನ್’ನಲ್ಲಿ ಚಿಕಿತ್ಸೆ ನಡೆಯಲಿದೆ.