ಸಂತೋಷ್ ಆನಂದರಾಮ್ ನಿರ್ದೇಶನದ "ರಾಜಕುಮಾರ" ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಹಿಟ್ ಆಗಿದೆ. ಅಷ್ಟೇ ಅಲ್ಲ, ಸಿನಿಮಾ ವಿಮರ್ಶಕರಿಂದಲೂ ಒಳ್ಳೆಯ ಸ್ಟಾರ್ ಪಡೆದಿದೆ.

ಬೆಂಗಳೂರು(ಏ. 23): ಪುನೀತ್ ರಾಜಕುಮಾರ್ ಅಭಿನಯದ "ರಾಜಕುಮಾರ" ಸಿನಿಮಾವನ್ನು ಇನ್ನೂ ವೀಕ್ಷಿಸಿಲ್ಲವೇ? ಒಮ್ಮೆ ನೋಡಿ ಮತ್ತೊಮ್ಮೆ ನೋಡುವ ಹುಮ್ಮಸ್ಸಿನಲ್ಲಿದ್ದೀರಾ? ಇಲ್ಲಿದೆ ನಿಮಗೆ ಒಳ್ಳೆಯ ಅವಕಾಶ. ನಾಳೆ, ಸೋಮವಾರ ರಾಜಕುಮಾರ ಚಿತ್ರವನ್ನು ಅರ್ಧಬೆಲೆಗೆ ನೋಡಿ ಆನಂದಿಸಿ. ವರನಟ ಡಾ| ರಾಜಕುಮಾರ್ ಅವರ ಜನ್ಮದಿನವಿರುವ ಹಿನ್ನೆಲೆಯಲ್ಲಿ "ರಾಜಕುಮಾರ" ಸಿನಿಮಾ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಬೆಲೆ ಕಡಿತ ಮಾಡಲಾಗಿದೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಇಂಥದ್ದೊಂದು ಆಫರನ್ನು ಜನರಿಗೆ ನೀಡಿದ್ದಾರೆ. ರಾಜ್ಯಾದ್ಯಂತ ರಾಜಕುಮಾರ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಥಿಯೇಟರ್'ಗಳಲ್ಲಿ ಟಿಕೆಟ್ ಬೆಲೆ ಶೇ.50ರಷ್ಟು ಕಡಿಮೆ ಇರಲಿದೆ. ನಾಳೆ ಒಂದು ದಿನ ಮಾತ್ರ ಈ ಆಫರ್ ಇರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂತೋಷ್ ಆನಂದರಾಮ್ ನಿರ್ದೇಶನದ "ರಾಜಕುಮಾರ" ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಹಿಟ್ ಆಗಿದೆ. ಅಷ್ಟೇ ಅಲ್ಲ, ಸಿನಿಮಾ ವಿಮರ್ಶಕರಿಂದಲೂ ಒಳ್ಳೆಯ ಸ್ಟಾರ್ ಪಡೆದಿದೆ. ಚಿತ್ರ ನೋಡಿದ ರಾಘವೇಂದ್ರ ರಾಜಕುಮಾರ್ ಅವರಂತೂ ತಮ್ಮ ತಂದೆಯ ನೆನಪಿನಿಂದ ಭಾವೋದ್ವೇಗಗೊಂಡಿದ್ದುಂಟು.