ಬೆಂಕಿ ಸಿದ್ರಾಮಣ್ಣ’ ಅಂತ ಫೇಮಸ್!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಕಿ ಸಿದ್ರಾಮಣ್ಣ ಅಂತಲೇ ಫೇಮಸ್ ಆಗಿದ್ದಾರೆ ಎಂದು ಬಿಜೆಪಿ ನಾಯಕ ಅಶೋಕ್ ಲೇವಡಿ ಮಾಡಿದರು.
ಒಂದು ಕೈಯಲ್ಲಿ ಬೆಂಕಿ ಪೊಟ್ಟಣವನ್ನೂ, ಮತ್ತೊಂದು ಕೈಯಲ್ಲಿ ಪೆಟ್ರೋಲನ್ನೂ ಹಿಡಿದುಕೊಂಡಿರುತ್ತಾರೆ. ಅದೇ ರೀತಿ ಈಗ ಲಿಂಗಾಯತ ಪ್ರತ್ಯೇಕ ಧರ್ಮವನ್ನೂ, ಕನ್ನಡ ಧ್ವಜವನ್ನೂ ಹಿಡಿದು ಓಡಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.

