ಆದರೆ ಮದ್ಯಪಾನ ಸರಬರಾಜು ಮಾಡುವ ಹೋಟೆಲ್'ಗಳು ಹೆದ್ದಾರಿಯ 500 ಮೀಟರ್ ಅಂತರದಲ್ಲಿರಬೇಕು ಜೊತೆಗೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸಬೇಕು. 1914ರ ಪಂಜಾಬ್ ಅಬಕಾರಿ ಕಾಯಿದೆಯ 26-ಎ ಸೆಕ್ಷನ್'ಗೆ ತಿದ್ದುಪಡಿ ತರುವುದರೊಂದಿಗೆ ಬಿಲ್ ಪಾಸ್ ಮಾಡಲಾಗಿದೆ.
ಚಂಡೀಗಢ(ಜೂ.23): ಹೋಟಲ್'ಗಳು, ರಸ್ಟೋರೆಂಟ್'ಗಳು ಹಾಗೂ ಇತರ ಸೂಚಿತ ಸ್ಥಳಗಳಲ್ಲಿ ಮದ್ಯಪಾನ ಸರಬರಾಜು ಮಾಡುವ ಬಿಲ್'ಅನ್ನು ಪಂಜಾಬ್ ಸರ್ಕಾರ ಪಾಸು ಮಾಡಿದೆ.
ಆದರೆ ಮದ್ಯಪಾನ ಸರಬರಾಜು ಮಾಡುವ ಹೋಟೆಲ್'ಗಳು ಹೆದ್ದಾರಿಯ 500 ಮೀಟರ್ ಅಂತರದಲ್ಲಿರಬೇಕು ಜೊತೆಗೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸಬೇಕು. 1914ರ ಪಂಜಾಬ್ ಅಬಕಾರಿ ಕಾಯಿದೆಯ 26-ಎ ಸೆಕ್ಷನ್'ಗೆ ತಿದ್ದುಪಡಿ ತರುವುದರೊಂದಿಗೆ ಬಿಲ್ ಪಾಸ್ ಮಾಡಲಾಗಿದೆ.
ಕಳೆದ ವರ್ಷದ ಡಿಸೆಂಬರ್'ನಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯ 500 ಮೀಟರ್ ಅಂತರದಲ್ಲಿ ಮದ್ಯಪಾನ ಅಂಗಡಿಗಳನ್ನು ಮುಚ್ಚಬೇಕು ಎಂದು ಆದೇಶಿಸಿತ್ತು. ತದ ನಂತರ ಪ್ರತಿಭಟನೆಗಳು ಹೆಚ್ಚಾದಾಗ ಆದೇಶವನ್ನು ಮಾರ್ಪಡಿಸಿ 220 ಮೀಟರ್ ಅಂತರದಲ್ಲಿ 20 ಸಾವಿರ ಜನಸಂಖ್ಯೆಯಿರುವ ಪ್ರದೇಶದಲ್ಲಿ ಮದ್ಯದಂಗಡಿಗಳನ್ನು ಸ್ಥಗಿತಗೊಳಿಸಬೇಕು ಎಂದಿತ್ತು.
ಬಿಲ್ ಪಾಸ್ ಮಾಡುವ ಸಂದರ್ಭದಲ್ಲಿ ವಿರೋಧ ಪಕ್ಷವಾದ ಶಿರೋಮಣಿ ಅಕಾಲಿ ದಳ-ಬಿಜೆಪಿ ಹಾಗೂ ಅಮ್ ಆದ್ಮಿ ಸದಸ್ಯರು ವಿಧಾನಸಭೆಯಲ್ಲಿ ಹಾಜರಿರಲಿಲ್ಲ.