ನವದೆಹಲಿ[ಸೆ. 24]  ಪಂಜಾಬ್ ರಾಜ್ಯದ ವಿವಿಧ ಕಡೆ ಪಾಕಿಸ್ತಾನ ಡ್ರೋಣ್ ಗಳು ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಬೀಳಿಸುತ್ತಿದ್ದು ಈ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಒತ್ತಾಯಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ(ಆರ್ಟಿಕಲ್ 370) ರದ್ದು ಪಡಿಸಿದ ನಂತರ ಪಾಕಿಸ್ತಾನದ ಡ್ರೋಣ್ ಗಳು ಆಗಾಗ ಕಿತಾಪತಿ ಮಾಡುತ್ತಲೇ ಇವೆ. ಈ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಅಮರೀಂದರ್ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ. ಕೆಂದ್ರ ಸರ್ಕಾರ ಅತಿ ಶೀಘ್ರದಲ್ಲಿ ನೆರವಿಗೆ ಬರಬೇಕು ಎಂದು ಪಂಜಾಬ್ ಸಿಎಂ ಕೋರಿಕೊಂಡಿದ್ದಾರೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಆಡಳಿತವಿದೆ.  ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ.

ಪಾಕ್ ವಿರುದ್ಧ ಬಿಪಿನ್ ರಾವತ್ ಕಿಡಿ,  ಪಿಒಕೆಗೆ  ಪ್ಲ್ಯಾನ್ ರೆಡಿ

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ನೀಡಿದ್ದ ಆರ್ಟಿಕಲ್ 370 ನ್ನು ರದ್ದು ಮಾಡಿದ ನಂತರ ಪಾಕಿಸ್ತಾನ ಒಂದೆಲ್ಲಾ ಒಂದು ಕುಕೃತ್ಯ ಮಾಡುತ್ತಲೇ ಬಂದಿದೆ. ಆಗಾಗ ಗಡಿಯಲ್ಲಿ ಉದ್ಧತಟತನ ತೋರಿಸುತ್ತಲೇ ಬಂದಿದೆ. ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಮಾಡುತ್ತಿದ್ದ ಉಪಟಳವನ್ನು ಈಗ ಪಂಜಾಬ್ ಗಡಿಗೂ ವಿಸ್ತರಣೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದ ವೇಳೆಯೂ ಭಯೋತ್ಪಾದನೆಯ ವಿರುದ್ಧದ ಹೋರಾಟದ  ಮಾತನಾಡಿದ್ದರು.  ಅಮೆರಿಕ ಅಧ್ಯಕ್ಷ ಟ್ರಂಪ್ ಸಹ  ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿರುತ್ತವೆ ಎಂದು ಘೋಷಣೆ ಮಾಡಿದ್ದರು.