ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕುಮಾರ್​ ಮತ್ತು ಮಂಜುಳಾ ಎಂಬ ಬಡ ದಂಪತಿಯ ಇಬ್ಬರು ಹೆಣ್ಣು ಮಕ್ಕಳ ಪೈಕಿ ಈಕೆ ಕಿರಿಯವಳು. ಹೆಸರು ಪ್ರೀತಿ. ಸಂಕಷ್ಟದಲ್ಲಿರುವ ಈ ಕುಟುಂಬದ ಮುದ್ದು ಮಗಳು ಪ್ರೀತಿಗೆ ಎರಡು ಕಿಡ್ನಿ ವಿಫಲವಾಗಿವೆ.

ಎರಡು ಕಿಡ್ನಿ ಕಳೆದುಕೊಂಡಿರುವ ಬಾಲಕಿಗೆ ಪವರ್​ ಸ್ಟಾರ್​​​ ಪುನೀತ್​​ ರಾಜ್​​ಕುಮಾರ್ ಅಂದ್ರೆ ಅಚ್ಚುಮೆಚ್ಚು. ​ಅಪ್ಪುನನ್ನು ನೋಡುವ ಆಸೆ ವ್ಯಕ್ತಪಡಿಸಿದ್ದ ಆ ಬಾಲಕಿಯ ಕನಸು ಕೊನೆಗೂ ಈಡೇರಿದೆ. ​ಮೊನ್ನೆ ಅಪ್ಪು ಹುಟ್ಟುಹಬ್ಬದ ದಿನ ಪ್ಲೀಸ್ ... ಅಪ್ಪು ಸಾರ್ .... ನಿಮ್ಮನ್ನು ನೋಡಬೇಕು ಅಂತ ಅಸೆ ಆಗ್ತಾ ಇದೆ. ವಿಶ್ ಯೂ ಹ್ಯಾಪಿ ಬರ್ತಡೇ ಅಂತ ತನ್ನ ಮನದಾಸೆ ವ್ಯಕ್ತಪಡಿಸಿದ್ದಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಖುದ್ದು ಪುನೀತ್​ ರಾಜ್​ ಕುಮಾರ್​​ ಆ ಬಾಲಕಿಯನ್ನು ಶೂಟಿಂಗ್​ ಸ್ಪಾಟ್​​ಗೆ ಕರೆಸಿಕೊಂಡು ಆ ಬಾಲಕಿಯ ಕನಸು ಈಡೇರಿಸಿದ್ದಾರೆ. ಎರಡು ಕಿಡ್ನಿ ಕಳೆದುಕೊಂಡಿರುವ ಈ ಬಾಲೆ ಸಾಯುವ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೋಡುವ ಆಸೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕುಮಾರ್​ ಮತ್ತು ಮಂಜುಳಾ ಎಂಬ ಬಡ ದಂಪತಿಯ ಇಬ್ಬರು ಹೆಣ್ಣು ಮಕ್ಕಳ ಪೈಕಿ ಈಕೆ ಕಿರಿಯವಳು. ಹೆಸರು ಪ್ರೀತಿ. ಸಂಕಷ್ಟದಲ್ಲಿರುವ ಈ ಕುಟುಂಬದ ಮುದ್ದು ಮಗಳು ಪ್ರೀತಿಗೆ ಎರಡು ಕಿಡ್ನಿ ವಿಫಲವಾಗಿವೆ.

Click:ಗ್ರಾಹಕರಿಗೆ ಬಂಪರ್ : ನಾಳೆಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ !

ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿದರೆ ಜೀವಂತವಾಗಿಡಬಹುದು. ಆದರೆ ದುಬಾರಿ ಚಿಕಿತ್ಸೆಗೆ ದುಡ್ಡಿಲ್ಲದೆ, ಡಯಾಲಿಸಿಸ್'ಗೂ ದುಡ್ಡಿಲ್ಲದೆ ಪರದಾಡುತ್ತಿರುವ ಈ ಬಡ ಕುಟುಂಬದ ಗೋಳು ಹೇಳ ತೀರದು. ಜೊತೆಗೆ ಈ ಪುಟ್ಟ ಬಾಲೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ಅಚ್ಚು ಮೆಚ್ಚು , ಅವರ ಹಾಡು, ಡ್ಯಾನ್ಸ್ ಎಲ್ಲವನ್ನೂ ನೋಡಿ ಮೆಚ್ಚಿ ಕೊಳ್ಳುವ ಈ ಬಾಲೆಗೆ ಸಾಯುವ ಮೊದಲು ಅವರನ್ನೊಮ್ಮೆ ನೋಡುವ ಕೊನೆಯಾಸೆ ಇತ್ತು. ಇದೀಗ ಆ ಆಸೆ ಈಡೇರಿದೆ. ಆಸ್ಪತ್ರೆಯ ವೆಚ್ಚ ನೀಡೋದಾಗಿ ಪುನೀತ್​ ಭರವಸೆ ನೀಡಿದ್ದಾರೆ.