ಹೀಗೆ ಈ 13 ವರ್ಷದ ಈ ಬಾಲೆ ಹೇಳ್ತಿದ್ರೆ ಎಂತವರಿಗಾದ್ರು ಕರುಳು ಚುರುಕ್ ಅನ್ನತ್ತೆ. ಯಾಕಂದ್ರೆ ಎರಡು ಕಿಡ್ನಿ ಕಳೆದುಕೊಂಡಿರುವ ಈ ಬಾಲೆ ಸಾಯುವ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೋಡಂತೆ.
ಪ್ಲೀಸ್ ... ಅಪ್ಪು ಸಾರ್ .... ನಿಮ್ಮನ್ನು ನೋಡಬೇಕು ಅಂತ ಅಸೆ ಆಗ್ತಾ ಇದೆ .. ಬನ್ನಿ ಸಾರ್..... ಪ್ಲೀಸ್.... ವಿಶ್ ಯೂ ಹ್ಯಾಪಿ ಬರ್ತಡೇ
ಹೀಗೆ ಈ 13 ವರ್ಷದ ಈ ಬಾಲೆ ಹೇಳ್ತಿದ್ರೆ ಎಂತವರಿಗಾದ್ರು ಕರುಳು ಚುರುಕ್ ಅನ್ನತ್ತೆ. ಯಾಕಂದ್ರೆ ಎರಡು ಕಿಡ್ನಿ ಕಳೆದುಕೊಂಡಿರುವ ಈ ಬಾಲೆ ಸಾಯುವ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೋಡಂತೆ. ಹೀಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಈ ಬಾಲೆ ಹೆಸರು ಪ್ರೀತಿ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಚಿಕ್ಕ ಇಸ್ತ್ರೀ ಅಂಗಡಿ ಇಟ್ಟುಕೊಂಡಿರುವ ಕುಮಾರ ಮತ್ತು ಮಂಜುಳಾ ಎಂಬ ಬಡ ದಂಪತಿಯ ಇಬ್ಬರು ಹೆಣ್ಣು ಮಕ್ಕಳ ಪೈಕಿ ಈಕೆ ಕಿರಿಯವಳು.
ಅಂದು ದುಡಿದರೇ ಅವತ್ತಿಗೆ ಹೊಟ್ಟೆಗೆ ಊಟ ಎಂಬಷ್ಟು ಸಂಕಷ್ಟದಲ್ಲಿರುವ ಈ ಕುಟುಂಬದ ಹುಡುಗಿ ಪ್ರೀತಿಗೆ ಎರಡು ಕಿಡ್ನಿ ವಿಫಲವಾಗಿವೆ. ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿದರೇ ಜೀವಂತವಾಗಿಡ ಬಹುದು. ಆದರೆ ದುಬಾರಿ ಚಿಕಿತ್ಸೆಗೆ ದುಡ್ಡಿಲ್ಲದೆ , ಡಯಾಲಿಸಿಸ್ ಗೂ ದುಡ್ಡಿಲ್ಲದೆ ಪರದಾಡುತ್ತಿರುವ ಈ ಬಡ ಕುಟುಂಬದ ಗೋಳು ಹೇಳ ತೀರದು. ಈ ಪುಟ್ಟ ಬಾಲೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೇ ಅಚ್ಚು ಮೆಚ್ಚು , ಅವರ ಹಾಡು , ಡ್ಯಾನ್ಸ್ ಎಲ್ಲವನ್ನೂ ನೋಡಿ ಮೆಚ್ಚಿ ಕೊಳ್ಳುವ ಈ ಬಾಲೆಗೆ ಸಾಯುವ ಮೊದಲು ಅವರನ್ನೊಮ್ಮೆ ನೋಡುವ ಕೊನೆಯಾಸೆ. ಹೇಗಾದರೂ ಸರಿ ಅವರನ್ನೊಮ್ಮೆ ನೋಡಿ ಕಣ್ಮುಚ್ಚಿ ಬಿಡುವ ಈ ಬಾಲೆಯ ಕೊನೆಯಾಸೆಯನ್ನು ನಟ ಪುನೀತ್ ರಾಜ್ ಕುಮಾರ್ ಈಡೇರಿಸಿಯಾರೇ ಎಂಬ ಆಶಾವಾದ ಈ ಬಾಲೆಯದ್ದು.
