ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ತ್ರಿಪುರಾದಲ್ಲಿನ ಸಿಎಂ ಮಾಣಿಕ್‌ ಸರ್ಕಾರ್‌ ನೇತೃತ್ವದ ಎಡಪಂಥೀಯ ಸರ್ಕಾರವನ್ನು ಕಿತ್ತೆಸೆಯುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ.

ಸೋನಮುರ (ತ್ರಿಪುರಾ): ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ತ್ರಿಪುರಾದಲ್ಲಿನ ಸಿಎಂ ಮಾಣಿಕ್‌ ಸರ್ಕಾರ್‌ ನೇತೃತ್ವದ ಎಡಪಂಥೀಯ ಸರ್ಕಾರವನ್ನು ಕಿತ್ತೆಸೆಯುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ.

ಇಲ್ಲಿನ ರಂಗಮಾಟಿಯಾ ಮದ್ರಸಾ ಮೈದಾನದಲ್ಲಿ ಚುನಾವಣಾ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ತಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳಲು ‘ನೀವು ನಕಲಿ ಮಾಣಿಕ್ಯ (ಮಾಣಿಕ್‌ ಸರ್ಕಾರ್‌) ಬಿಟ್ಟು ಅಸಲಿ ಹೀರಾ(ವಜ್ರ)’ ಆಯ್ಕೆ ಮಾಡಿ, ಎಂದು ಪರೋಕ್ಷವಾಗಿ ಹಾಲಿ ಸಿಎಂ ಮಾಣಿಕ್‌ ಸರ್ಕಾರ್‌ ಆಡಳಿತವನ್ನು ವ್ಯಂಗ್ಯವಾಡಿದ್ದಾರೆ.

ಹೀರಾ ಪದದ ಪೂರ್ಣಾರ್ಥ ತಿಳಿಸಿದ ಮೋದಿ, ‘ಎಚ್‌’ ಎಂದರೆ ಹೆದ್ದಾರಿ, ‘ಐ’ ಎಂದರೆ ಇಂಟರ್ನೆಟ್‌, ‘ಆರ್‌’ ಎಂದರೆ ರಸ್ತೆ ಸಾರಿಗೆ, ‘ಎ’ ಎಂದರೆ ವಿಮಾನ ಮಾರ್ಗಗಳು ಎಂದು ವಿವರಿಸಿದರು. ಫೆ. 18ರಂದು 60 ಸದಸ್ಯ ಬಲದ ತ್ರಿಪುರಾ ವಿಧಾನಸಭಾ ಚುನಾವಣೆ ನಡೆಯಲಿದೆ.