Asianet Suvarna News Asianet Suvarna News

ಪುಣೇರಿ ಪಲ್ಟಾನ್ ಹ್ಯಾಟ್ರಿಕ್ ಜಯ : ಮಿಂಚಿದ ರೈಡರ್ ದೀಪಕ್ ಹೂಡಾ

ರೈಡಿಂಗ್ ಹಾಗೂ ಡಿಫೆನ್ಸ್’ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ದೀಪಕ್ ಹೂಡಾ ಪಡೆ ಡೆಲ್ಲಿಯನ್ನು ಪಂದ್ಯದ 26ನೇ ನಿಮಿಷದಲ್ಲಿ ಆಲೌಟ್ ಮಾಡಿತು.

Puneri Paltan hand Dabang Delhi second home defeat

ವರದಿ: ನವೀನ್ ಕೊಡಸೆ

ದಬಾಂಗ್ ಡೆಲ್ಲಿ ತವರಿನಲ್ಲಿ 2ನೇ ಬಾರಿ ಸೋತರೆ ಪುಣೇರಿ ಪಲ್ಟಾನ್ ಹ್ಯಾಟ್ರಿಕ್ ಜಯ ದಾಖಲಿಸಿತು. ನಾಯಕ ದೀಪಕ್ ನಿವಾಸ್ ಹೂಡಾ ಅವರ ಪ್ರಭಾವಿ ರೈಡಿಂಗ್(10) ನೆರವು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ತ್ಯಾಗರಾಜ್ ಒಳಾಂಗಣ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿದ ದಬಾಂಗ್ ಡೆಲ್ಲಿ ಆರಂಭದಲ್ಲಿ 3-0 ಅಂಕಗಳ ಮುನ್ನಡೆ ಕಾಯ್ದುಕೊಂಡಿತು. 3ನೇ ನಿಮಿಷದಲ್ಲಿ ಪುಣೇರಿ ಪಲ್ಟಾನ್ ಪರ ದೀಪಕ್ ನಿವಾಸ್ ಹೂಡಾ ರೈಡಿಂಗ್’ನಲ್ಲಿ ಅಂಕಗಳ ಖಾತೆ ತೆರೆದರು. 11ನೇ ನಿಮಿಷದಲ್ಲಿ ಪಲ್ಟಾನ್ ಪಡೆ 8-7 ಅಂಕಗಳ ಹಿನ್ನಡೆ ಅನುಭವಿಸಿತ್ತು. ಆದರೆ ಬಳಿಕ ಮಿಂಚಿನ ದಾಳಿ ಸಂಘಟಿಸಿದ ದಬಾಂಗ್ ಡೆಲ್ಲಿ ಮೊದಲಾರ್ಧ ಮುಕ್ತಾಯದ ವೇಳೆಗೆ 14-8 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ಮೊದಲಾರ್ಧದಲ್ಲಿ ಎದುರಾದ ಅನಿರೀಕ್ಷಿತ ಹಿನ್ನಡೆಯಿಂದ ಎಚ್ಚೆತ್ತುಕೊಂಡ ಪುಣೇರಿ ಪಲ್ಟಾನ್ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ದ್ವಿತಿಯಾರ್ಧದ 4ನೇ ನಿಮಿಷದಲ್ಲಿ 15-15 ಅಂಕಗಳ ಸಮಬಲ ಸಾಧಿಸಿದ ಪಲ್ಟಾನ್ ನಿರಂತರ ಅಂಕಗಳಿಸುತ್ತಲೇ ಸಾಗಿತು. ರೈಡಿಂಗ್ ಹಾಗೂ ಡಿಫೆನ್ಸ್’ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ದೀಪಕ್ ಹೂಡಾ ಪಡೆ ಡೆಲ್ಲಿಯನ್ನು ಪಂದ್ಯದ 26ನೇ ನಿಮಿಷದಲ್ಲಿ ಆಲೌಟ್ ಮಾಡಿತು. ಈ ವೇಳೆ ಪಲ್ಟಾನ್ 21-15 ಅಂಕಗಳಿಂದ ಮುಂದಿತ್ತು. ಮೊದಲ ಆಲೌಟ್ ಶಾಕ್’ನಿಂದ ಹೊರಬರುವಷ್ಟರಲ್ಲೇ ರಾಜೇಶ್ ಮೊಂಡಾಲ್ ಹಾಗೂ ದೀಪಕ್ ಹೂಡಾ ಮತ್ತೆ ಮಿಂಚಿನ ದಾಳಿ ನಡೆಸಿ ಮೂರು ನಿಮಿಷದೊಳಗಾಗಿ ಡೆಲ್ಲಿಯನ್ನು ಮತ್ತೆ ಆಲೌಟ್ ಮಾಡಿ 16-30 ಪಲ್ಟಾನ್’ಗೆ ಬೃಹತ್ ಮುನ್ನಡೆ ಒದಗಿಸಿಕೊಟ್ಟರು. ಇನ್ನೇನು ಪಂದ್ಯ ಮುಕ್ತಾಯಕ್ಕೆ ಕೊನೆಯ 4 ನಿಮಿಷಗಳಿದ್ದಾಗ ಪಲ್ಟಾನ್ ಪಡೆಯನ್ನು ಆಲೌಟ್ ಮಾಡುವ ಮೂಲಕ ಪಂದ್ಯದಲ್ಲಿ ಕಮ್’ಬ್ಯಾಕ್ ಮಾಡುವ ಮುನ್ಸೂಚನೆ ನೀಡಿತಾದರೂ ಅಷ್ಟರಲ್ಲಾಗಲೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ಅಂತಿಮವಾಗಿ ಪುಣೇರಿ ಪಲ್ಟಾನ್ 34-29 ಅಂಕಗಳಿಂದ ಜಯಭೇರಿ ಬಾರಿಸಿತು.

ಟರ್ನಿಂಗ್ ಪಾಯಿಂಟ್:

ಆರಂಭದಲ್ಲಿ ಗಳಿಸಿಕೊಂಡಿದ್ದ ಮುನ್ನಡೆಯನ್ನು ಕಾಯ್ದುಕೊಳ್ಳಲು ವಿಫಲವಾಗಿದ್ದು ಹಾಗೂ ಕೇವಲ 3 ನಿಮಿಷಗಳ ಅಂತರದಲ್ಲಿ ಆಲೌಟ್ ಆಗಿದ್ದು ಡೆಲ್ಲಿ ಸೋಲಿಗೆ ಪ್ರಮುಖ ಕಾರಣವೆನಿಸಿತು.

ಶ್ರೇಷ್ಠ ರೈಡರ್: ದೀಪಕ್ ಹೂಡಾ(10)

ಶ್ರೇಷ್ಠ ಡಿಫೆಂಡರ್: ಗಿರೀಶ್ ಎರ್ನಾಕ್  

Follow Us:
Download App:
  • android
  • ios