ಈ ಕನ್ನಡ ಪ್ರೇಮಿ ಜರ್ಮನ್​ ವ್ಯಕ್ತಿಯನ್ನು ಪರಿಚಯಿಸಿದ್ದು ಬೇರಾರೂ ಅಲ್ಲ, ಪವರ್ ಸ್ಟಾರ್​ ಪುನೀತ್ ರಾಜ್​ಕುಮಾರ್​.  ಜರ್ಮನಿಯ ಜುಲೈನ್ ಎಂಬವರ ಜತೆ ಕನ್ನಡದಲ್ಲಿ ಮಾತನಾಡಿರುವ ಸಂಭಾಷಣೆಯ ವೀಡಿಯೋವನ್ನು ಪವರ್ ಸ್ಟಾರ್‌ ಪುನೀತ್‌ ರಾಜ್‌'ಕುಮಾರ್‌ ತಮ್ಮ ಫೇಸ್‌'ಬುಕ್‌'ನಲ್ಲಿ ಹಂಚಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರುವ ಎಷ್ಟೋ ಜನರಿಗೆ ಕನ್ನಡ ಭಾಷೆ ಬರೋದಿಲ್ಲ. ಆದರೆ ಜರ್ಮನಿಯ ವ್ಯಕ್ತಿಗೆ ಕನ್ನಡ ಅಂದ್ರೆ ಪ್ರಾಣ. ಅವರ ಕನ್ನಡ ಪ್ರೇಮ ನೋಡಿದರೆ ಅಪ್ಪಟ ಕನ್ನಡಿಗನ ಮನ ತುಂಬಿ ಬರುತ್ತದೆ.

ಹೌದು, ಈ ಕನ್ನಡ ಪ್ರೇಮಿ ಜರ್ಮನ್​ ವ್ಯಕ್ತಿಯನ್ನು ಪರಿಚಯಿಸಿದ್ದು ಬೇರಾರೂ ಅಲ್ಲ, ಪವರ್ ಸ್ಟಾರ್​ ಪುನೀತ್ ರಾಜ್​ಕುಮಾರ್​. ಜರ್ಮನಿಯ ಜುಲೈನ್ ಎಂಬವರ ಜತೆ ಕನ್ನಡದಲ್ಲಿ ಮಾತನಾಡಿರುವ ಸಂಭಾಷಣೆಯ ವೀಡಿಯೋವನ್ನು ಪವರ್ ಸ್ಟಾರ್‌ ಪುನೀತ್‌ ರಾಜ್‌'ಕುಮಾರ್‌ ತಮ್ಮ ಫೇಸ್‌'ಬುಕ್‌'ನಲ್ಲಿ ಹಂಚಿಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ಹುಣಸವಾಡಿಯಲ್ಲಿ ವಾಸಿಸ್ತಿರೋ ಜೂಲಿಯನ್​ ಅಪ್ಪಟ ಪುನೀತ್ ಅಭಿಮಾನಿ. ಇತ್ತೀಚಿಗೆ ಪುನೀತ್ ಭೇಟಿಯಾಗಿದ್ದ ಜೂಲಿಯನ್​, ದೊಡ್ಮನೆ ಹುಡುಗ ಚಿತ್ರದ ತ್ರಾಸ್​ ಅಗೈತಿ ಹಾಡು ಹಾಡಿ ಮೋಡಿ ಮಾಡಿದ್ದಾರೆ. ಜರ್ಮನಿಯ ಜೂಲಿಯನ್​ ಅವರಿಗೆ ಕನ್ನಡದ ಮೇಲಿರುವ ಪ್ರೀತಿ ಅಭಿಮಾನ ಕಂಡು ಪುನೀತ್​ ರಾಜ್​ಕುಮಾರ್ ಫುಲ್​ ಫಿದಾ ಆಗಿದ್ದಾರೆ.