ಕಚೇರಿಯಲ್ಲಿಯೇ ಕಂಪ್ಯೂಟರ್ ಕೇಬಲ್'ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ತುಂಬ ಭದ್ರತೆಯಿರುವ ಪುಣೆಯ ಕಚೇರಿಯಲ್ಲಿ ಹೊರಗಡೆಯಿಂದ ಬಂದು ಕೊಲೆ ಮಾಡಿರುವ ಸಾಧ್ಯತೆ ಕಡಿಮೆಯಿದ್ದು, ಭದ್ರತಾ ಸಿಬ್ಬಂದಿ ಬಾಬೇನ್ ಸೈಕಿಯಾ ಎಂಬುವವರ ಮೇಲೆ ಶಂಕೆ ವ್ಯಕ್ತವಾಗಿದೆ.

ಪುಣೆ(ಜ.30): ಇನ್ಫೋಸಿಸ್ ಕಚೇರಿಯಲ್ಲೇ ಟೆಕ್ಕಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. 25 ವರ್ಷ ವಯಸ್ಸಿನ ರಾಸಿಲಾ ರಾಜು ಕೊಲೆಯಾದವರು. ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಇವರು ಮೂಲತಃ ಕೇರಳದವರು.

ಕಚೇರಿಯಲ್ಲಿಯೇ ಕಂಪ್ಯೂಟರ್ ಕೇಬಲ್'ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ತುಂಬ ಭದ್ರತೆಯಿರುವ ಪುಣೆಯ ಕಚೇರಿಯಲ್ಲಿ ಹೊರಗಡೆಯಿಂದ ಬಂದು ಕೊಲೆ ಮಾಡಿರುವ ಸಾಧ್ಯತೆ ಕಡಿಮೆಯಿದ್ದು, ಭದ್ರತಾ ಸಿಬ್ಬಂದಿ ಬಾಬೇನ್ ಸೈಕಿಯಾ ಎಂಬುವವರ ಮೇಲೆ ಶಂಕೆ ವ್ಯಕ್ತವಾಗಿದೆ. ಆತ ನಿನ್ನೆಯಿಂದ ನಾಪತ್ತೆಯಾಗಿದ್ದಾನೆ. ಈತನ ವಿರುದ್ಧ ರಾಸಿಲಾ ಅವರು ದೂರು ನೀಡುವುದಾಗಿ ಬೆದರಿಸಿದ್ದರು. ಈ ಕಾರಣದಿಂದಲೇ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೊಲೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥೆ, ಆಕೆಯ ಕುಟುಂಬ ವರ್ಗದವರಿಗೆ ಅಗತ್ಯ ನೆರವು ನೀಡುವುದರ ಜೊತೆ ಪ್ರಕರಣದ ಬಗ್ಗೆ ಪೊಲೀಸರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದೆ.