Asianet Suvarna News Asianet Suvarna News

ಕೊರೆಗಾಂವ್ ಹಿಂಸಾಚಾರ : ಜಿಗ್ನೇಶ್ ಮೇವಾನಿ – ಖಾಲಿದ್ ವಿರುದ್ಧ ದೂರು

ಪುಣೆ ಪೊಲೀಸರು ಗುಜರಾತ್ ಶಾಸಕ  ಹಾಗೂ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ವಿರುದ್ಧ ದೂರು ಸ್ವೀಕರಿಸಿದ್ದಾರೆ.

Pune Cops Receive Complaint Against Jignesh Mevani And Umar Khalid
  • Facebook
  • Twitter
  • Whatsapp

ಪುಣೆ (ಜ.3): ಪುಣೆ ಪೊಲೀಸರು ಗುಜರಾತ್ ಶಾಸಕ  ಹಾಗೂ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ

ಇನ್ನು ದಿಲ್ಲಿ ಜೆಎನ್’ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧವೂ ಕೂಡ ದೂರು ಸ್ವೀಕಾರ ಮಾಡಿದ್ದಾಗಿ ಪುಣೆ ಪೊಲೀಸರು ಹೇಳಿದ್ದಾರೆ.

ಮೇವಾನಿ ಹಾಗೂ ಉಮರ್ ಖಾಲಿದ್ ಎಲ್ಗಾರ್ ಪರಿಷದ್ ಏರ್ಪಡಿಸಿದ್ದ ಭೀಮಾ ಕೊರೆಗಾಂವ್ ಯುದ್ಧದ 200ನೇ ವರ್ಷದ ಹಿನ್ನೆಲೆ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಳೆದ ಡಿ.31 ರಂದು ಈ ಕಾರ್ಯಕ್ರಮ ನಡೆದಿದ್ದು, ಈ ವೇಳೆ  ಇಬ್ಬರೂ ಕೂಡ ಪ್ರಚೋದನಾಕಾರಿಯಾಗಿ ಮಾತನಾಡಿದ್ದರು ಎಂದು ಅಕ್ಷಯ್ ಬಿಕಂದ್ ಮತ್ತು ಆನಂದ್ ದೋಂಡ್ ಎನ್ನುವವರು  ಖಾಲಿದ್ ಹಾಗೂ ಮೇವಾನಿ ವಿರುದ್ಧ ದೂರು 

ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios