ರಾಯಚೂರು[ಫೆ.17] ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಪೋಸ್ಟ್ ಶೇರ್ ಮಾಡಿದ್ದಕ್ಕೆ ರಾಯಚೂರು ತಾಲೂಕಿನ  ಕಾಡ್ಲೂರು ಗ್ರಾಮದ ಮಹಮ್ಮದ್ ರಫಿ ಎಂಬಾತನನ್ನು ಬಂಧಿಸಲಾಗಿದೆ.

ರಾಯಚೂರು ಗ್ರಾಮೀಣ ಪೊಲೀಸರು ದೇಶದ್ರೋಹಿಯನ್ನು ಬಂಧಿಸಿದ್ದಾರೆ. ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿನ ಸೈನಿಕರ ವೀರಮರಣ ಸರಿಯಾಗಿದೆ ಎಂಬ ಅರ್ಥದಲ್ಲಿ ಉರ್ದುವಿನಲ್ಲಿ ಪೋಸ್ಟ್ ಶೇರ್ ಮಾಡಿದ್ದ ರಫಿ ಇದೀಗ ಪೊಲೀಸರ ವಶದಲ್ಲಿದ್ದಾನೆ.

ದೇಶದ್ರೋಹದ ಪೋಸ್ಟ್ ಹಾಕಿದ ಬೆಳಗಾವಿ ಶಿಕ್ಷಕಿ

ಇಸ್ಲಾಂಬಾದ್ನ ರಾಜಾ ಎಂ ಜಾಹೀರ್ ಹಾಕಿದ ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿದ್ದ ಮಹಮ್ಮದ್ ರಫಿ ಫೆ.15ರಂದು ಅದನ್ನು ಶೇರ್ ಮಾಡಿದ್ದ. ಅಲ್ಲಾ ಹೋ ಅಕ್ಬರ್, ಪಾಕ್ ಫೌಜಿ ಜಿಂದಾಬಾದ್. ಪಾಕಿಸ್ತಾನ್ ಫಾಯಿಂದಾ ಬಾ ದ್ ಎನ್ನುವ ಉರ್ದು ಭಾಷೆಯಲ್ಲಿ ಪೋಸ್ಟ್ ಮಾಡಿದ್ದವ ಇದೀಗ ಪೊಲೀಸರ ಬಂಧನದಲ್ಲಿದ್ದಾನೆ.

ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸಂದೇಶ ಶೇರ್ ಮಾಡಿದ ಆರೋಪದ ಮೇಲೆ ಮಹಮ್ಮದ್ ರಫಿ ಬಂಧನ ಮಾಡಲಾಗಿದ್ದು ರಾಯಚೂರು ಗ್ರಾಮೀಣ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.