ಪ್ರಧಾನಿ ಅನುದಾನದಡಿ ಓದಲು ಬಂದವರೆ ಪಾಕ್ ಪರ ಘೋಷಣೆ ಕೂಗಿದ್ರು!
ಮೂರು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಪುಲ್ವಾಮಾದದಲ್ಲಿ ಪಾಕಿಸ್ತಾನಿ ಉಗ್ರರ ದಾಳಿಗೆ ನಮ್ಮ ವೀರ ಯೋಧರು ಹುತಾತ್ಮರಾಗಿದ್ದು ಇಡೀ ಭಾರತ ದೇಶವೇ ಕಣ್ಣೀರಿಡುತ್ತಿದೆ. ಸೂತಕದಲ್ಲಿರುವಾಗಲೇ ನಮ್ಮಗಳ ತೆರಿಗೆ ಹಣದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿ ದೇಶ ವಿರೋಧಿ ಪೋಸ್ಟ್ ಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತ ಮೆರೆದಿದ್ದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಂಗಳೂರು[ಫೆ.17] ಇವರು ಮಾಡಿರುವ ಹೇಯ ಕೃತ್ಯ ಕೇಳಿದ್ರೆ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತದೆ. ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮದ ಸ್ಫೂರ್ತಿ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಾದ ಜಾಕೀರ್ ಮಖ್ಬುಲ್ (23) , ವಾಕರ್ ಅಹಮದ್ (21) ಹಾಗು ಗೌಹರ್ (21) ಈ ಮೂವರು ಜಮ್ಮು ಕಾಶ್ಮೀರ ದಿಂದ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದಿದ್ದಾರೆ.
ಪ್ರಧಾನಮಂತ್ರಿ ಅನುದಾನದಡಿಯಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು ಕಳೆದ ಮೂರು ದಿನದ ಹಿಂದೆ ನಡೆದ ವೀರ ಯೋಧರ ಹತ್ಯೆಗೆ ಇಡೀ ದೇಶ ಸಂತಾಪ ಸೂಚಿಸಿದ್ರೆ ಈ ಮೂವರು ದೇಶ ದ್ರೋಹಿಗಳು ಮಾತ್ರ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆಯನ್ನ ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ.
ದೇಶದ್ರೋಹದ ಪೋಸ್ಟ್ ಹಾಕಿದ ಬೆಳಗಾವಿ ಶಿಕ್ಷಕಿ ಪೊಲೀಸರ ವಶಕ್ಕೆ
ಫೇಸ್ಬುಕ್ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ದೇಶದ್ರೋಹಿ ಪೋಸ್ಟ್ ಹಾಕುವ ಮೂಲಕ ಅವರ ವಿಕೃತಿಯನ್ನ ತೋರಿಸಿದ್ದಾರೆ. ಈ ಕಿಡಿಗೇಡಿಗಳು ತಮ್ಮ ಫೇಸ್ಬುಕ್ ನಲ್ಲಿ ದೇಶ ವಿರೋಧಿ ಬರಹ ಹಾಕಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಸಹಪಾಠಿಗಳ ಮೇಲೂ ಸಹ ಹಲ್ಲೆಗೆ ಮುಂದಾಗಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿ ದಾಂಧಲೆ ಸೃಷ್ಟಿಸಿದ್ದಾರೆ. ವಿಷಯ ತಿಳಿದ ಸೂರ್ಯ ಸಿಟಿ ಪೋಲೀಸರು ಈ ಕಿಡಿಗೇಡಿ ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾಲೇಜು ವಿದ್ಯಾರ್ಥಿಗಳ ಕುಕೃತ್ಯದಿಂದ ಕೆಂಡಾ ಮಂಡಲವಾದ ಸಾರ್ವಜನಿಕರು ಹಾಗು ಹಲವು ಸಂಘಟನೆಯ ಕಾರ್ಯಕರ್ತರು ಚಂದಾಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿದರು. ಸೂರ್ಯನಗರ ಪೋಲಿಸ್ ಠಾಣೆ ಬಳಿ ಬಂದು ದೇಶ ದ್ರೋಹಿ ವಿದ್ಯಾರ್ಥಿಗಳನ್ನ ಈ ಕೂಡಲೇ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಎಸ್ಪಿ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಮೂರು ಜನ ಆರೋಪಿಗಳನ್ನು ಈಗಾಗಲೇ ಬಂಧಿಸಿ ನ್ಯಾಯಂಗ ಬಂಧನಕ್ಕೆ ನೀಡಿದ್ದೇವೆ. ಇವರ ವಿರುದ್ಧ ಭಾರತ ದೇಶಕ್ಕೆ ಅವಮಾನ ಮಾಡಿದ ದೇಶದ್ರೋಹಿ ಹಾಗು ನಮ್ಮ ಸೈನಿಕರಿಗೆ ಅವಮಾನ ಮಾಡಿದ ಬಗ್ಗೆ 123(A), 153(B) , 504,323,34 ಈ ಸೆಕ್ಷನ್ ಗಳಲ್ಲಿ ಪ್ರಕರಣ ದಾಖಲು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.