ನವದೆಹಲಿ : ಪುಲ್ವಾಮದಲ್ಲಿ ಭೀಕರ ಉಗ್ರ ದಾಳಿ ನಡೆದು 44 ಯೋಧರು ಹುತಾತ್ಮರಾದ  ಬೆನ್ನಲ್ಲೇ  ಇದೀಗ CRPF ಭದ್ರತೆಯನ್ನು ಉನ್ನತೀಕರಿಸಲು ನಿರ್ಧರಿಸಿದೆ. 

CRPF ಪಡೆಯ ನಿರ್ವಹಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೆ  ಏರಿಸಲಾಗುತ್ತಿದೆ.  ಹೊಸ ರೀತಿಯ ನೀತಿ ನಿಯಮಗಳು ಜಾರಿ ಜಾರಿ ತರಲಾಗುತ್ತದೆ ಎಂದು CRPF ಡೈರೆಕ್ಟರ್ ಜನರಲ್  ಆರ್ ಆರ್ ಭಟ್ನಾಗರ್ ಹೇಳಿದ್ದಾರೆ. 

ಪುಲ್ವಾಮದಲ್ಲಿ ದಾಳಿ ನಡೆದ ಬೆನ್ನಲ್ಲೇ ಕಾಶ್ಮೀರದಲ್ಲಿ 2 ದಿನಗಳ ಪ್ರವಾಸ ಕೈಗೊಂಡಿದ್ದು, ಟ್ರಾಫಿಕ್ ಕಂಟ್ರೋಲ್, ಸೇನಾ ಸಂಚಾರದ ಸಮಯ ಬದಲಾವಣೆ, ಉಳಿದುಕೊಳ್ಳುವ ಸ್ಥಳಗಳ ಬದಲಾವಣೆ ಸೇರಿದಂತೆ ವಿವಿಧ ರೀತಿಯ ಬದಲಾವಣೆ ಮಾಡಲಾಗುತ್ತದೆ ಎಂದರು. 

2 ಪಡೆಗಳು ಲಾಟೂಮೋಡ್ ಮತ್ತು ಪುಲ್ವಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ  ಪರೀಕ್ಷಾರ್ಥವಾಗಿ ಇಲ್ಲಿ ಬದಲಾವಣೆಯ ನಿಯಮಗಳನ್ನು ಜಾರಿ ತರಲಾಗುತ್ತದೆ. ಜಮ್ಮು ಕಾಶ್ಮೀರದಲ್ಲಿ ಸೇನಾ ಪಡೆ ವಾಹನಗಳು ಸಂಚರಿಸುವಾಗಿ ಯಾವುದೇ ನಾಗರಿಕರ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.