ನವದೆಹಲಿ[ಫೆ.21]: ಸಿಆರ್‌ಪಿಎಫ್‌ನ 40 ವೀರಯೋಧರನ್ನು ಬಲಿ ಪಡೆದ ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಕೋರ ಅದಿಲ್‌ ಅಹಮದ್‌ ದಾರ್‌ಗೆ ತರಬೇತಿ ಕೊಟ್ಟಿದ್ದವ, 1999ರಲ್ಲಿ ಕಂದಹಾರ್‌ ವಿಮಾನವನ್ನು ಅಪಹರಿಸಿದ್ದ ಕುಖ್ಯಾತ ಭಯೋತ್ಪಾದಕ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಹುತಾತ್ಮ ಯೋಧ ಗುರು ಕುಟುಂಬಕ್ಕೆ ತಿಂಗಳ ಸ್ಯಾಲರಿ ನೀಡಿದ ದೇವದುರ್ಗ PSI ಅಗ್ನಿ

ಪುಲ್ವಾಮಾ ದಾಳಿ ಹಾಗೂ ತರಬೇತಿಯ ಸಂಪೂರ್ಣ ಮೇಲುಸ್ತುವಾರಿಯನ್ನು ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ ಸೋದರ, ಕಂದಹಾರ್‌ ವಿಮಾನ ಅಪಹರಣದ ರೂವಾರಿ ಇಬ್ರಾಹಿಂ ಅಜರ್‌ ಹೊತ್ತುಕೊಂಡಿದ್ದ. ಈ ದಾಳಿ ಸಲುವಾಗಿ ಪಾಕಿಸ್ತಾನದಿಂದ ನುಸುಳಿ ಭಾರತಕ್ಕೆ ಆಗಮಿಸಿದ್ದ. ಕೆಲಸ ಮುಗಿದ ಬಳಿಕ ಆತ ಪಾಕಿಸ್ತಾನಕ್ಕೆ ಪರಾರಿಯಾದ ಎಂದು ಮೂಲಗಳು ತಿಳಿಸಿವೆ.

'ಕೊನೆ ಸಲ ಆ ಕಾಲ್ ತೆಗೆದಿದ್ರೆ ಆಗಿತ್ತು ಸಾರ್' ಎಂದ ಹುತಾತ್ಮ ಯೋಧನ ಪತ್ನಿಯ ರೋಧನೆ ಮತ್ತವಳ ದೇಶಭಕ್ತಿ

ಇಬ್ರಾಹಿಂ ಬಂದು ಹೋಗುವುದಕ್ಕೆ ಫೆ.18ರಂದು ಭದ್ರತಾ ಪಡೆಗಳಿಂದ ಹತ್ಯೆಗೀಡಾದ ಜೈಷ್‌ ಕಮಾಂಡರ್‌ ಕಮ್ರಾನ್‌ ಸೂಕ್ತ ವ್ಯವಸ್ಥೆ ಮಾಡಿದ್ದ. ಬಾಂಬ್‌ ತಯಾರಿಗೆ ಬೇಕಾದ ವಸ್ತುಗಳ ಪೂರೈಕೆ ಹಾಗೂ ಸಾಗಣೆಗೂ ಎಲ್ಲ ನೆರವನ್ನೂ ನೀಡಿದ್ದ. ಈ ಕಾರ್ಯಕ್ಕೆ ಮಹಿಳೆಯರು ಹಾಗೂ ಮಕ್ಕಳನ್ನು ಬಳಸಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ.

ಪಾಕ್ ಮೇಲೆ ಬಿತ್ತು ಬಾಂಬ್: ಮೋದಿ ಹೊಡೆತಕ್ಕೆ ಇಮ್ರಾನ್ ಲಬೋ ಲಬೋ!

1999ರಲ್ಲಿ 176 ಪ್ರಯಾಣಿಕರು ಹಾಗೂ 15 ಸಿಬ್ಬಂದಿಯಿದ್ದ ಏರ್‌ ಇಂಡಿಯಾ ವಿಮಾನವನ್ನು ಅಪಹರಿಸಿ ಆಷ್ಘಾನಿಸ್ತಾನದ ಕಂದಹಾರ್‌ಗೆ ಒಯ್ಯಲಾಗಿತ್ತು. ಅದರ ಹಿಂದಿದ್ದ ರೂವಾರಿಯೇ ಇಬ್ರಾಹಿಂ. ವಿಮಾನವನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ತನ್ನ ಅಣ್ಣ ಮೌಲಾನಾ ಮಸೂದ್‌ ಅಜರ್‌ ಹಾಗೂ ಮತ್ತಿಬ್ಬರು ಉಗ್ರರನ್ನು ಬಿಡುಗಡೆ ಮಾಡಬೇಕು ಎಂದು ಇಬ್ರಾಹಿಂ ಷರತ್ತು ವಿಧಿಸಿದ್ದ. ಅದರಂತೆ ಸರ್ಕಾರ ಜೈಲಿನಿಂದ ಉಗ್ರರನ್ನು ಬಿಡುಗಡೆ ಮಾಡಿತ್ತು.