ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ 'ದ್ವೇಷಿಸುವುದು ಉತ್ತರವಲ್ಲ' ಎಂದು ಟ್ವೀಟ್ ಮಾಡಿದ್ದ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾಗೆ ಖಡಕ್ IPS ಅಧಿಕಾರಿ ಡಿಐಜಿ ರೂಪಾ ತಿರುಗೇಟು ನೀಡಿದ್ದಾರೆ.

ಬೆಂಗಳೂರು[ಫೆ.18]: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಯ ಬಗ್ಗೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಮಾಡಿದ ಟ್ವೀಟ್‌ಗೆ ಐಜಿಪಿ ಡಿ.ರೂಪಾ ನೀಡಿರುವ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Scroll to load tweet…

‘ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿ ನಿಜಕ್ಕೂ ಶಾಕ್‌ ಆಗಿದೆ. ದ್ವೇಷಿಸುವುದು ಉತ್ತರವಲ್ಲ. ಹುತಾತ್ಮ ಯೋಧರ ಕುಟುಂಬ ಹಾಗೂ ಗಾಯಗಳು ಯೋಧರಿಗೆ ಶಕ್ತಿ ನೀಡಲಿ’ ಎಂದು ಪ್ರಿಯಾಂಕಾ ಟ್ವೀಟ್‌ ಮಾಡಿದ್ದರು. ದ್ವೇಷಿಸುವುದು ಉತ್ತರವಲ್ಲ ಎಂಬ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

Scroll to load tweet…

ಡಿ.ರೂಪಾ ಅವರು ಈ ಟ್ವೀಟ್‌ಗೆ ಪ್ರತಿಕ್ರಿಯಿಸಿ, ‘ಯೋಧರ ಮೇಲಿನ ದಾಳಿ ಕೇವಲ ಪ್ರೀತಿ-ದ್ವೇಷದ ಸಿನಿಮಾ ಕಥೆಯಂತಲ್ಲ. ಅದೊಂದು ದೇಶದ ಮೇಲಿನ ದಾಳಿ. ಒಂದು ದೇಶದ ಶಾಂತಿಯುತ ಅಸ್ತಿತ್ವದ ಮೇಲೆ ಅಕ್ರಮ ಶಕ್ತಿಗಳು ನಡೆಸುವ ದಾಳಿ’ ಎಂದು ಟ್ವೀಟ್‌ ಮಾಡಿದ್ದಾರೆ. ಇದನ್ನು ಸಾವಿರಾರು ಜನರು ಶೇರ್‌ ಮಾಡಿ, ರೂಪಾ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.