ಮಕ್ಕಳಲ್ಲಿ ಪೋಲಿಯೋ ತಡೆಗಟ್ಟುವ ಸಲುವಾಗಿ ರಾಷ್ಟ್ರೀಯ ಲಸಿಕಾ ದಿನದ ಪ್ರಯುಕ್ತ ಮಾ.11ರಂದು ಭಾನುವಾರ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದೆ. ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕಾಗಿ 32,737 ಪೋಲಿಯೋ  ಬೂತ್‌ಗಳನ್ನು ಮಾಡಲಾಗಿದೆ.  

ಬೆಂಗಳೂರು: ಮಕ್ಕಳಲ್ಲಿ ಪೋಲಿಯೋ ತಡೆಗಟ್ಟುವ ಸಲುವಾಗಿ ರಾಷ್ಟ್ರೀಯ ಲಸಿಕಾ ದಿನದ ಪ್ರಯುಕ್ತ ಮಾ.11ರಂದು ಭಾನುವಾರ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದೆ. ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕಾಗಿ 32,737 ಪೋಲಿಯೋ ಬೂತ್‌ಗಳನ್ನು ಮಾಡಲಾಗಿದೆ.

ಸಂಚಾರಿ ತಂಡ ಹಾಗೂ ಟ್ರಾನ್ಸಿಟ್ ತಂಡಗಳು ಭಾನುವಾರ ಲಸಿಕಾ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ. 

ಆ್ಯಪ್ ಮೂಲಕ ಹುಡುಕಿ: ಇದೇ ಮೊದಲ ಬಾರಿಗೆ ಹತ್ತಿರದ ಪೋಲಿಯೊ ಲಸಿಕಾ ಕೇಂದ್ರ ಪತ್ತೆಗೆ ರಾಜ್ಯ ಸರ್ಕಾರವು ಮೊಬೈಲ್ ಆ್ಯಪ್ ರೂಪಿಸಿದೆ. ಆಸಕ್ತರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ nearby polio centers ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹತ್ತಿರದ ಲಸಿಕಾ ಕೇಂದ್ರ ಮಾಹಿತಿಯನ್ನು ಪಡೆಯಬಹುದು.