ತಿರುವನಂತಪುರ(ಜು.04): ದಕ್ಷಿಣ ಭಾರತದ ಪ್ರಸಿದ್ಧ ನಟಿಯೊಬ್ಬರ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣ, 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂನ ಪ್ರಸಿದ್ಧ ನಟ ದಿಲೀಪ್ ಅವರಿಗೆ ಸುತ್ತಿಕೊಳ್ಳುತ್ತಿರುವಂತಿದೆ.

ಪ್ರಕರಣ ಸಂಬಂಧ 13 ತಾಸು ಪೊಲೀಸ್ ವಿಚಾರಣೆಗೆ ದಿಲೀಪ್ ಅವರು ಒಳಪಟ್ಟ ಕೆಲವೇ ದಿನಗಳ ಅಂತರದಲ್ಲಿ ದಿಲೀಪ್ ಅವರ ಸಿನಿಮಾ ‘ಜಾರ್ಜ್ಗೆಟ್ಟನ್ಸ್ ಪೂರಂ’ನ ಸೆಟ್ನಲ್ಲಿ ನಟಿಯ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಇರುವಚಿತ್ರಗಳು ಬಿಡುಗಡೆಯಾಗಿವೆ. ಈ ದೃಶ್ಯಗಳನ್ನು ಮಲಯಾಳಂ ಸುದ್ದಿವಾಹಿನಿಗಳು ಪ್ರಸಾರ ಮಾಡುತ್ತಿವೆ. ಹೀಗಾಗಿ ದಿಲೀಪ್ ಅವರಿಗೆ ಸಂಕಷ್ಟ ಎದುರಾದಂತಾಗಿದೆ. ‘ಜಾರ್ಜ್ಗೆಟ್ಟನ್ಸ್ ಪೂರಂ’ ಸಿನಿಮಾ ಇತ್ತೀಚೆಗೆ ತೆರೆ ಕಂಡ ದಿಲೀಪ್ ಅವರ ಕೊನೆಯಸಿನಿಮಾ.ಪಲ್ಸರ್ ಸುನಿ ತನ್ನ ಸಹಾಯಕನ ಮೂಲಕ ದಿಲೀಪ್ ಅವರ ಮ್ಯಾನೇಜರ್ಗೆ ಕರೆ ಮಾಡಿ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದ. ಈ ಸಂಬಂಧ ದಿಲೀಪ್ ಅವರನ್ನು 13 ತಾಸು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.