ತಮ್ಮ ಸ್ವಾಗತಕ್ಕಾಗಿ ಹಣ ಖರ್ಚು ಮಾಡಿದ ಆಯೋಜಕರಿಗೆ ಪಾಠ| ಪುದುಚೇರಿ ಲೆಫ್ಟಿನೆಂಟ್ ಗರ್ವನರ್ ಕಿರಣ್ ಬೇಡಿ ವಿಡಿಯೋ ವೈರಲ್| ಆಯೋಜಕರಿಗೆ ತಮ್ಮ ಭದ್ರತಾ ಸಿಬ್ಬಂದಿಯಿಂದ ಹಣ ವಾಪಸ್ ಕೊಡಿಸಿದ ಕಿರಣ್ ಬೇಡಿ| ತಮ್ಮ ಸ್ವಾಗತಕ್ಕಾಗಿ ಹಾಕಿದ್ದ ಬ್ಯಾನರ್ ತೆಗೆದ ಕಿರಣ್ ಬೇಡಿ| ಹೂಮಾಲೆ, ಶಾಲು ಸ್ವೀಕರಿಸಲು ನಿರಾಕರಿಸಿದ ಕಿರಣ್ ಬೇಡಿ      

ಪುದುಚೇರಿ(ಡಿ.30): ಸರಳತೆಯ ಸಾಕಾರ ಮೂರ್ತಿ, ಖಡಕ್ ಐಪಿಎಸ್ ಆಫೀಸರ್, ಪುದುಚೇರಿಯ ಲೆಫ್ಟಿನೆಂಟ್ ಗರ್ವನರ್, ಭಾರತದ ಮಹಿಳಾ ಶಕ್ತಿಯ ಪ್ರತೀಕ...ಇಷ್ಟು ಸಾಕು ಕಿರಣ್ ಬೇಡಿ ಅವರನ್ನು ಪರಿಚಯ ಮಾಡಲು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಇಷ್ಟೆಲ್ಲ ಪೀಠಿಕೆ ಹಾಕಿದರೆ ಕಿರಣ್ ಬೇಡ ಬೈತಾರೆ. ಯಾಕೆ ಅಂತೀರಾ?. ಇದಕ್ಕೆ ಉತ್ತರ ಈ ವಿಡಿಯೋದಲ್ಲಿದೆ. ಕಾರ್ಯಕ್ರಮವೊಂದಕ್ಕೆ ಆಹ್ವಾನಿತರಾಗಿದ್ದ ಕಿರಣ್ ಬೇಡಿ, ಅಲ್ಲಿ ತಮ್ಮ ಸ್ವಾಗತಕ್ಕಾಗಿ ಮಾಡಿದ ಖರ್ಚನ್ನು ಕಂಡು ಆಯೋಜಕರಿಗೆ ಭರ್ಜರಿ ಪಾಠ ಮಾಡಿದ್ದಾರೆ.

"

ಕಾರ್ಯಕ್ರಮದ ಮುಖ್ಯ ದ್ವಾರದಲ್ಲಿ ತಮ್ಮನ್ನು ಸ್ವಾಗತಿಸುವ ಫ್ಲೆಕ್ಸ್ ಕಂಡು ದಂಗಾದ ಕಿರಣ್ ಬೇಡಿ, ಇದಕ್ಕಾಗಿ ಎಷ್ಟು ಖರ್ಚು ಮಾಡಿದ್ದೀರಿ ಎಂದು ಆಯೋಜಕರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ತಾವೇ ಖುದ್ದಾಗಿ ಬ್ಯಾನರ್ ಅನ್ನು ತೆಗೆದು, ಆಯೋಜಕನಿಗೆ ತಮ್ಮ ಭದ್ರತಾ ಸಿಬ್ಬಂದಿ ಕಡೆಯಿಂದ 500 ರೂ. ಕೊಡಿಸಿದ್ದಾರೆ.

ನಂತರ ಒಳಬಂದ ಕಿರಣ್ ಬೇಡಿ ಅವರಿಗೆ ಹೂಮಾಲೆ ಹಾಕಿ, ಶಾಲು ಹೊದಿಸಿ ಸ್ವಾಗತಿಸಲು ಮುಂದಾದಾಗ, ಅದಕ್ಕೂ ಬೇಡ ಎಂದ ಕಿರಣ್ ಬೇಡಿ, ಮತ್ತೆ ತಮ್ಮ ಭದ್ರತಾ ಸಿಬ್ಬಂದಿಯಿಂದ ಆಯೋಜಕರಿಗೆ ಹಣ ವಾಪಸ್ ಕೊಡಿಸಿದ್ದಾರೆ.