ಇವರು ಉಗ್ರರ ಪಾಲಿನ ಸಿಂಹಸ್ವಪ್ನ. ಯಾವುದೇ ಶಸ್ತ್ರಾಸ್ತ್ರವಿಲ್ಲದೇ ಕಾನೂನಿನ ಅಸ್ತ್ರ ಉಪಯೋಗಿಸಿ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸುವ ಪಬ್ಲಿಕ್ ಪ್ರಾಸಿಕ್ಯೂಟರ್ ಇವರು. 2008 ರ ಭಯೋತ್ಪಾದಕ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಪ್ರತಿಯೊಬ್ಬರು ಇವರನ್ನು ನೆನೆಸಿಕೊಳ್ಳುತ್ತಾರೆ. ಹೌದು. ನಾವು ಹೇಳಹೊರಟಿರುವುದು ಖ್ಯಾತ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಬಗ್ಗೆ. ಅವರ ಸಕ್ಸಸ್ ಬಗ್ಗೆ ನಿಮ್ಮ ಸುವರ್ಣದಲ್ಲಿ ಫೋಕಸ್ ನಲ್ಲಿ. ಇಲ್ಲಿದೆ ನೋಡಿ ವಿಡಿಯೋ. 

ಇವರ ಹೆಸರನ್ನು ಕೇಳಿದರೆ ಕ್ರಿಮಿನಲ್ ಗಳ ಎದೆಯಲ್ಲಿ ಸಣ್ಣಗೆ ನಡುಕ ಹುಟ್ಟುತ್ತದೆ. ವಕೀಲರ ಪಾಲಿನ ರೋಲ್ ಮಾಡೆಲ್. ಡೊಡ್ಡ ದೊಡ್ಡ ಪಾತಕಿಗಳಿಗೆ ಮಣ್ಣು ಮುಕ್ಕಿಸಿದ್ದಾರೆ. ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ದೊರಕಿಸಿಕೊಟ್ಟ ಪುಣ್ಯಾತ್ಮ. ಅವರೇ ಖ್ಯಾತ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ.

ಉಜ್ವಲ್ ನಿಕಂ ಕೈಯಲ್ಲಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ. ಕಾನೂನೇ ಇವರ ಅಸ್ತ್ರ. ಇವರು ಕೇಸ್ ತೆಗೆದುಕೊಂಡ್ರು ಅಂದ್ರೆ ಅದು ಗೆದ್ದಂತೆಯೇ. ಹಾಗಾಗಿ 2008 ರ ಮುಂಬೈಯ ದಾಳಿ ಪ್ರಕರಣವನ್ನು ಸರ್ಕಾರ ಉಜ್ವಲ್ ಕೈಗೆ ಒಪ್ಪಿಸಿದ್ದು. ಈ ದಾಳಿಯ ಹಂತಕ ಕಸಬ್ ಗೆ ಗಲ್ಲಿಶಿಕ್ಷೆಯಾಗುವಂತೆ ಮಾಡಿದ್ದು ಇವರ ಚಾಣಾಕ್ಷತನ. ಅವರ ಬಗ್ಗೆ ಇನ್ನಷ್ಟು ಕುತೂಹಲಕಾರಿ ಸಂಗತಿ ತಿಳಿದುಕೊಳ್ಳಲು ಈ ವಿಡಿಯೋಗಳನ್ನು ನೋಡಿ.