ಪಬ್ ಜಿಯಲ್ಲಿ ಬಿಜಿಯಾದ್ರೆ ಜೈಲೂಟ ಫಿಕ್ಸ್.. ಹುಚ್ಚಾಟ ಆಡ್ತಿದ್ದವರ ಬಂಧನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Mar 2019, 9:53 PM IST
PUBG ban 10 people booked for playing the game
Highlights

ಯುವಜನತೆಯನ್ನು ಒಂದರ್ಥದಲ್ಲಿ ಕಂಗೆಡಿಸಿರುವ ಪಬ್ ಜಿ ಗೇಮ್ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಗುಜರಾತ್ ಪೊಲೀಸರು ಮೊದಲ ಹೆಜ್ಜೆ ಇಟ್ಟಿದ್ದಾರೆ.

ಅಹಮದಾಬಾದ್[ಮಾ. 14]  ಯುವಕರ ಮಾನಸಿಕ ಸ್ಥಿತಿಯನ್ನೇ ಕದಡುತ್ತಿರುವ ಪಬ್ ಜಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಗುಜರಾತ್​ ಪೊಲೀಸರು ಮುಂದಾಗಿದ್ದಾರೆ. ಗೇಮ್​ ಆಡುತ್ತಿದ್ದ 10 ಜನರನ್ನು ಬಂಧಿಸಿದ್ದಾರೆ.

ಗುಜರಾತ್​ನ ಸೂರತ್​, ರಾಜ್​ಕೋಟ್​ ಮತ್ತು ವಡೋದರಾಗಳಲ್ಲಿ ಕಳೆದ ವಾರ ಗೇಮ್​ ಮೇಲೆ ನಿಷೇಧ ಹೇರಲಾಗಿದೆ. ಆ ನಂತರ ಗುಜರಾತ್​ನ ಹಲವು ನಗರಗಳಲ್ಲಿ ಪಬ್​ಜಿ ಮತ್ತು ಮೋಮೋ ಚಾಲೆಂಜ್​ ಅನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಆದರೂ ಮೊಬೈಲ್ ಗೇಮ್ ನಲ್ಲಿ ಬಿಜಿಯಾಗಿದ್ದ  6 ವಿದ್ಯಾರ್ಥಿಗಳು ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ.

ಹುಚ್ಚಾಟ ಪಬ್ ಜಿ ಬ್ಯಾನ್

ಬಂಧಿತ ಯುವಕರಲ್ಲಿ ಹಲವರಿಗೆ ತಮ್ಮ ಸುತ್ತಲಿನ ಪ್ರಪಂಚದ ಅರಿವೇ ಇರಲಿಲ್ಲ. ಬಂಧಿತರ ಮೊಬೈಲ್​ ಫೋನ್​ಗಳನ್ನು ಜಪ್ತಿ ಮಾಡಲಾಗಿದ್ದು ಎಲ್ಲರಿಗೂ ಇದೊಂದು ಎಚ್ಚರಿಕೆ ಸಂದೇಶ ಆಗಿದೆ ಎಂದು ಪೊಲೀಸ್​ ಅಧಿಕಾರಿ ರೋಹಿತ್​ ರಾವಲ್​ ತಿಳಿಸಿದ್ದಾರೆ.

loader