ಗಾಮಧೀನಗರ[ಮೇ.19]: ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳು ಪಬ್‌ಜಿ ಆಟದ ದಾಸರಾಗಿರುವ ಬಗ್ಗೆ ಸಹಾಯವಾಣಿಗೆ ಕರೆ ಮಾಡುವುದನ್ನು ನೋಡಿದ್ದೇವೆ. ಆದರೆ, ಪಬ್‌ಜಿ ಆಟದ ಗೀಳು ಹತ್ತಿಸಿಕೊಂಡ ಗುಜರಾತಿನ ಮಹಿಳೆಯೊಬ್ಬಳು ತನ್ನ ಗಂಡನಿಂದ ವಿಚ್ಛೇದನ ಕೋರಿ ಮಹಿಳಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾಳೆ.

ಅಷ್ಟಕ್ಕೂ ಆಕೆ ವಿಚ್ಛೇದನ ನೀಡುತ್ತಿರುವುದು ಗಂಡನ ಮೇಲಿನ ಕೋಪದಿಂದ ಅಲ್ಲ. ತನ್ನ ಜೊತೆ ಪಬ್‌ಜಿ ಆಡುವ ಜೊತೆಗಾರನೊಂದಿಗೆ ಇರುವ ಸಲುವಾಗಿ.

18ನೇ ವಯಸ್ಸಿನಲ್ಲೇ ಮದುವೆ ಆದ ಆಕೆಗೆ ಒಂದು ಮಗುವಿದೆ. ಕೆಲವು ತಿಂಗಳ ಹಿಂದೆ ಪಬ್‌ ಆಟದ ಗೀಳು ಅಂಟಿಸಿಕೊಂಡಿದ್ದ ಆಕೆಗೆ ಪಬ್‌ಜಿ ಆಡುವ ಯುವಕನೊಬ್ಬ ಪರಿಚಯವಾಗಿದ್ದ. ಈಗ ಪಬ್‌ಜಿ ಆಡುವ ಸಲುವಾಗಿ ಆತನೊಂದಿಗೆ ಇರುವುದಾಗಿ ಹಠ ಹಿಡಿದಿದ್ದಾಳೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.