ಪೊಲೀಸರ ವಿಚಾರಣೆಗೆ ಒಳಗಾಗಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಐಜೂರಿನ ಗೀತಾಮಂದಿರ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ. ಬಡಾವಣೆ ವಾಸಿ ಗೀತಮ್ಮ ಪುತ್ರ ವೆಂಕಟೇಶ್ (17) ಮೃತ ವಿದ್ಯಾರ್ಥಿ. ಈತ ತನ್ನ ಮನೆಯಲ್ಲಿಯೇ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಾಮನಗರ: ಪೊಲೀಸರ ವಿಚಾರಣೆಗೆ ಒಳಗಾಗಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಐಜೂರಿನ ಗೀತಾಮಂದಿರ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ. ಬಡಾವಣೆ ವಾಸಿ ಗೀತಮ್ಮ ಪುತ್ರ ವೆಂಕಟೇಶ್ (17) ಮೃತ ವಿದ್ಯಾರ್ಥಿ. ಈತ ತನ್ನ ಮನೆಯಲ್ಲಿಯೇ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆ ವಿವರ: ಆತ್ಮಹತ್ಯೆ ಮಾಡಿಕೊಂಡ ವೆಂಕಟೇಶ್‌ನ ತಂದೆ ಹನುಮಂತರಾಯಪ್ಪ ಮೃತಪಟ್ಟಿದ್ದು, ಕುಟುಂಬದ ಜವಾಬ್ದಾರಿಯನ್ನು ವೆಂಕಟೇಶ್ ಹೊತ್ತಿದ್ದನು. ಚನ್ನಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಿಕೊಂಡು, ಬಿಡುವಿನ ಸಮಯದಲ್ಲಿ ಕೆಲಸ ಮಾಡಿಕೊಂಡು ಮನೆ ಮತ್ತು ತನ್ನ ಓದಿನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದನು.

ಮೂರು ದಿನಗಳ ಹಿಂದೆ ವೆಂಕಟೇಶ್, ಈತನ ತಾಯಿ ಸೇರಿದಂತೆ ಇತರರು ಹಣ ನೀಡಬೇಕೆಂದು ಸೋದರ ಸಂಬಂಧಿಗಳಾದ ಮಾಗಡಿ ಮಾರಣ್ಣ ಮತ್ತು ಮಾರಕ್ಕ ಎನ್ನುವವರು ಎಂದು ಐಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ದೂರಿನ ಹಿನ್ನಲೆಯಲ್ಲಿ ವೆಂಕಟೇಶ್, ಇವರ ತಾಯಿ ಗೀತಮ್ಮ ಇತರರು ಠಾಣೆಗೆ ಹೋಗಿದ್ದಾರೆ. ಈ ವೇಳೆ ಪೊಲೀಸರು ವೆಂಕಟೇಶ್‌ನನ್ನು ಥಳಿಸಿದ್ದಾರೆ. ಇದರಿಂದ ಮನನೊಂದ ವೆಂಕಟೇಶ್ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಮಾಗಡಿ ಮಾರಣ್ಣ ಮತ್ತು ಮಾರಕ್ಕ ವಿರುದ್ಧ ಮೃತ ವೆಂಕಟೇಶ್ ಕುಟುಂಬಸ್ಥರು ದೂರು ನೀಡಿದ್ದಾರೆ.