ಪರಪ್ಪನ ಅಗ್ರಹಾರ ಬಳಿ ಇರುವ ಕೇಂದ್ರ ಕಾರಾಗೃಹದಲ್ಲಿ ಸಜಾ ಖೈದಿಯಾಗಿದ್ದ ವಿಕೃತ ಕಾಮಿ ಸೈಕೋ ಜಯಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬೆಂಗಳೂರು (ಫೆ. 27): ಪರಪ್ಪನ ಅಗ್ರಹಾರ ಬಳಿ ಇರುವ ಕೇಂದ್ರ ಕಾರಾಗೃಹದಲ್ಲಿ ಸಜಾ ಖೈದಿಯಾಗಿದ್ದ ವಿಕೃತ ಕಾಮಿ ಸೈಕೋ ಜಯಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ಲೇಡ್ ನಿಂದ ಕತ್ತುಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಎರಡು ಗಂಟೆಯಲ್ಲಿ ಈ ಘಟನೆ ನಡೆದಿದೆ. ಕೂಡಲೇ ಜಯಶಂಕರ್’ರವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ದಾರಿಯ ಮಧ್ಯೆ ಜಯಶಂಕರ್ ಸಾವನ್ನಪ್ಪಿದ್ದಾರೆ. 

ಕಳೆದ ಎರಡು ವರ್ಷಗಳ ಹಿಂದೆ ಜೈಲಿನಿಂದ ಎಸ್ಕೇಪ್ ಅಗಲು ಪ್ರಯತ್ನಿಸಿ ಜೈಲಿನ ರಕ್ಷಣಾ ಗೋಡೆ ಹಾರಿ ಸೊಂಟ ಮುರಿದುಕೊಂಡಿದ್ದ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಂಕರನಿಗೆ ಪ್ರತ್ಯೇಕ ಸೆಲ್ ನೀಡಲಾಗಿತ್ತು. ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಕುಖ್ಯಾತಿಗಳಿಸಿದ್ದ ಜಯಶಂಕರ್ 19 ಕ್ಕೂ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ. 

ತಮಿಳುನಾಡಿನ ಸೇಲಂ ಮೂಲದವನಾದ ಸೈಕೋ ಜಯಶಂಕರ್ ಕೊಯಮತ್ತೂರಿನಲ್ಲಿ ಲಾರಿಚಾಲಕನಾಗಿ ಕೆಲಸ ಮಾಡುತ್ತಿದ್ದ. ತಮಿಳುನಾಡಿನಲ್ಲಿ 11 ಮಹಿಳೆಯರು , ಕರ್ನಾಟಕದ ಲ್ಲಿ 4 ಮಹಿಳೆಯರ ಅತ್ಯಾಚಾರ, ಕೊಲೆ, ಪೊಲೀಸ್ ಪೇದೆಯ ಪತ್ನಿಯನ್ನೇ ಅತ್ಯಾಚಾರ ಎಸಗಿದ್ದ.