ಬೆಂಗಳೂರಿಗೆ ಮತ್ತೊಬ್ಬ ಸೈಕೋ ಎಂಟ್ರಿ ಕೊಟ್ಟಿದ್ದಾನೆ. ನೀವು ಒಂಟಿಯಾಗಿ ರಸ್ತೆಯಲ್ಲಿ ಸಿಕ್ಕರೆ ಈ ಆಸಾಮಿ ನಿಮ್ಮನ್ನು ಬಿಡಲ್ಲ. ಮಹಿಳೆಯರ ಒಳ ಉಡುಪು ಧರಿಸಿ, ಲಿಪ್ ಸ್ಟಿಕ್ ಹಾಕಿರುವ ಈ ಸೈಕೋ ಹುಡಗಿಯರಿಗೆ ರಸ್ತೆಯಲ್ಲೇ ಕಿರುಕುಳ ನೀಡುತ್ತಾನೆ. ಇದೀಗ ಮಿಸಸ್ ಇಂಡಿಯಾ ಸ್ಪರ್ಧಿ ರಾಜಶ್ರೀಗೂ ಈತ ಕಿರುಕುಳ ನೀಡಿದ್ದು, ಈ ಕುರಿತಾಗಿ ರಾಜಶ್ರೀ ತಮ್ಮ ಫೇಸ್ಬುಕ್'ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು(ಆ.08): ಬೆಂಗಳೂರಿಗೆ ಮತ್ತೊಬ್ಬ ಸೈಕೋ ಎಂಟ್ರಿ ಕೊಟ್ಟಿದ್ದಾನೆ. ನೀವು ಒಂಟಿಯಾಗಿ ರಸ್ತೆಯಲ್ಲಿ ಸಿಕ್ಕರೆ ಈ ಆಸಾಮಿ ನಿಮ್ಮನ್ನು ಬಿಡಲ್ಲ. ಮಹಿಳೆಯರ ಒಳ ಉಡುಪು ಧರಿಸಿ, ಲಿಪ್ ಸ್ಟಿಕ್ ಹಾಕಿರುವ ಈ ಸೈಕೋ ಹುಡುಗಿಯರಿಗೆ ರಸ್ತೆಯಲ್ಲೇ ಕಿರುಕುಳ ನೀಡುತ್ತಾನೆ. ಇದೀಗ ಮಿಸಸ್ ಇಂಡಿಯಾ ಸ್ಪರ್ಧಿ ರಾಜಶ್ರೀಗೂ ಈತ ಕಿರುಕುಳ ನೀಡಿದ್ದು, ಈ ಕುರಿತಾಗಿ ರಾಜಶ್ರೀ ತಮ್ಮ ಫೇಸ್ಬುಕ್'ನಲ್ಲಿ ಬರೆದುಕೊಂಡಿದ್ದಾರೆ.
ಈ ಘಟನೆಯನ್ನು ಫೇಸ್ಬುಕ್'ನಲ್ಲಿ ಬರೆದುಕೊಂಡಿರುವ ರಾಜಶ್ರೀ ನೈಸ್ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಎಚ್ಚರದಿಂದಿರಲು ಸೂಚಿಸುವುದರೊಂದಿಗೆ, ಸಹಾಯವಾಣಿಯ ಅಧಿಕಾರಿಗಳ ನಿರ್ಲಕ್ಷ್ಯವನ್ನೂ ಬಹಿರಂಗಪಡಿಸಿದ್ದಾರೆ. ತನಗಾದ ಕಹಿ ಅನುಭವವನ್ನುವರು ಈ ರೀತಿ ಬರದುಕೊಂಡಿದ್ದಾರೆ.
ನಾನು ನನ್ನ ಗಂಡನೊಂದಿಗೆ ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರೋಡ್'ಗೆ ಪ್ರಯಾಣಿಸುತ್ತಿದ್ದೆ. ಆದರೆ ನೈಸ್ ರಸ್ತೆಯಲ್ಲಿ ನಮ್ಮ ಮೋಟಾರು ಗಾಡಿ ಕೆಟ್ಟು ಹೋಯಿತು. ಹೀಗಾಗಿ ಹಿಂದೆ ಬರುತ್ತಿದ್ದ ಚಾಲಕನ ಬಳಿ ಲಿಫ್ಟ್ ಕೇಳಿದ ನನ್ನ ಪತಿ ಮೆಕ್ಯಾನಿಕ್'ನನ್ನು ಕರೆತರಲು ತೆರಳಿದರು. ಆದರೆ ಇದೇ ಸಂದರ್ಭದಲ್ಲಿ ಅಲ್ಲಿದ್ದ ಸೈಕೋನಂತೆ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬ ನನ್ನ ಮೇಲೆ ದಾಳಿ ಮಾಡಿದ. ಆತ ಮಹಿಳೆಯರ ಒಳುಡುಪು(ಬ್ರಾ) ಧರಿಸಿದ್ದು, ಒಳ ಬದಿಯಲ್ಲಿ ಹತ್ತಿಯುಂಡೆಗಳನ್ನು ಇಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ನನ್ನ ಸಮೀಪ ಬರುತ್ತಿದ್ದಂತೆಯೇ ಆತ ತನ್ನ ಶರ್ಟ್ ಕಳಚಿ ನನ್ನನ್ನು ತನ್ನ ಬಳಿ ಎಳೆದುಕೊಂಡ. ಮಹಿಳೆಯರಂತೆ ಮೇಕಪ್ ಮಾಡಿಕೊಂಡಿದ್ದ ಆತ ತನ್ನ ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚಿಕೊಂಡಿದ್ದ ಹೀಗಂತ ಆತ ಮಂಗಳಮುಖಿಯಾಗಿರಲಿಲ್ಲ. ಆತನ ವಿಚಿತ್ರ ವರ್ತನೆ ಕಂಡು ಯಾರಾದರೂ ನನ್ನ ಸಹಾಯಕ್ಕೆ ಬರಲಿ ಎಂದು ಕಿರುಚಲಾರಂಭಿಸಿದೆ. ಅದು ರಸ್ತೆ ನಿರ್ಜನ ಹಾಗೂ ಖಾಲಿಯಾಗಿರುವುದರಿಂದ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ವಾಹನಗಳೆಲ್ಲವೂ ಅತ್ಯಂತ ವೇಗವಾಗಿ ಸಾಗುತ್ತಿದ್ದವು. ಹೀಗಾಗಿ ನನ್ನ ಕೂಗು ಯಾರಿಗೂ ಕೇಳಿಸಲಿಲ್ಲ ಅಲ್ಲದೆ ಅಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿಯಲಿಲ್ಲ. ಆ ಸಂದರ್ಭದಲ್ಲಿ ನಾನು ಪೊಲೀಸರನ್ನು ಕರೆಯುವುದಾಗಿ ಬೆದರಿಸಿದೆ ಇದನ್ನು ಕೇಳಿದ ತಟಸ್ಥನಾಗಿ ನಿಂತ ಆತ ಗಾಬರಿಗೊಂಡವನಂತೆ ನನ್ನನ್ನು ದಿಟ್ಟಿಸುತ್ತಿದ್ದ. ಮೊಬೈಲ್ ತೆಗೆದ ನಾನು ಆತನ ಫೋಟೋ ಕ್ಲಿಕ್ಕಿಸಲು ಅನುವಾದೆ ಇದನ್ನು ಕಂಡ ಆತ ಅಲ್ಲಿಂದ ಓಡಿ ಹೋದ. ಬಿಳಿ ಹೆಲ್ಮೆಟ್ ಧರಿಸಿದ್ದ ಆತ ಓರ್ವ ಸೈಕೋ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇಂತಹ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಹೀಗೆ ಓಡಾಡಲು ಬಿಟ್ಟರೆ ಅಪಾಯ ತಪ್ಪಿದ್ದಲ್ಲ. ಇಂತಹ ಕೆಟ್ಟ ಪರಿಸ್ಥಿತಿ ಈ ರಸ್ತೆಯಲ್ಲಿ ಓಡಾಡುವ ಯಾವುದೇ ವ್ಯಕ್ತಿಗೂ ಎದುರಾಗಬಹುದು ಹೀಗಾಗಿ ಇದನ್ನು ಕಡೆಗಣಿಸದಿರಿ.
ಘಟನೆ ನಡೆದಾಗ ನೈಸ್ ರಸ್ತೆಯಲ್ಲಿರುವ ಫಲಕದಲ್ಲಿ ಸೂಚಿಸಿದ ಸಹಾಯವಾಣಿಗೆ ಕರೆ ಮಾಡಲು ಪ್ರಯತ್ನಿಸಿದೆ. ಆದರೆ ಯಾರೊಬ್ಬರೂ ಸರಿಯಾಗಿ ಸ್ಪಂದಿಸಲಿಲ್ಲ. ಎರಡು ತಾಸಿಗೂ ಹೆಚ್ಚಿನ ಸಮಯ ನಾವು ಸಹಾಯದ ನಿರೀಕ್ಷೆಯಿಂದ ಅಲ್ಲಿ ಕಾಯುತ್ತಿದ್ದೆವಾದರೂ ಅಧಿಕಾರಿಗಳಿಂದ ಯಾವುದೇ ಸಹಾಯ ಸಿಗಲಿಲ್ಲ
