ಸಾಮಾನ್ಯವಾಗಿ ಅಧಿಕಾರದಲ್ಲಿ ಮೇಲಿರುವ ವ್ಯಕ್ತಿಗಳು ತಮ್ಮ ಕೈ ಕೆಳಗಿನ ಸಿಬ್ಬಂದಿಯನ್ನು ಸಮಾನವಾಗಿ ನೋಡುವುದು ತುಂಬಾನೇ ಕಡಿಮೆ. ಆದರೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಹೆಸರು ಗಳಿಸಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಈ ಮಾತಿಗೆ ಭಿನ್ನವಾಗಿ ನಿಲ್ಲುತ್ತಾರೆ. ತಮ್ಮ ಕೆಳಗಿನವರಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಅವರ ಕೆಲಸವನ್ನು ಶ್ಲಾಘಿಸುತ್ತಾರೆ. 

ಚುನಾವಣೆಯ ಹೀರೋಗಳೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡ 'ಸಿಂಗಂ', ಟ್ವೀಟ್ ವೈರಲ್

ಪಿಎಸ್ ಐ ಅರ್ಜುನ್ ಎಂಬುವವರು ಉತ್ತಮವಾಗಿ ದೇಹ ದಾರ್ಢ್ಯತೆ ಬೆಳೆಸಿಕೊಂಡಿದ್ದರು. ಪ್ರತಿದಿನವೂ ತಪ್ಪದೇ ವರ್ಕೌಟ್ ಮಾಡುತ್ತಿದ್ದರು. ಅರ್ಜುನ್ ಅವರ ಈ ಕೆಲಸವನ್ನು ಗಮನಿಸಿದ ಡಿಸಿಪಿ ಅಣ್ಣಾಮಲೈ ಅವರನ್ನು ಅಭಿನಂದಿಸಿದ್ದಾರೆ. ದಿನಾ ತಪ್ಪದೇ ವರ್ಕೌಟ್ ಮಾಡುವಂತೆ ಹುರಿದುಂಬಿಸಿದ್ದಾರೆ. ಅಣ್ಣಾಮಲೈ ಮೆಚ್ಚುಗೆಯಿಂದ ಇನ್ನಷ್ಟು ಉತ್ತೇಜನ ಪಡೆದ ಅರ್ಜುನ್ ತಾವೇ ಒಂದು ಜಿಮ್ ಓಪನ್ ಮಾಡಿ ಅಲ್ಲಿ ತಪ್ಪದೇ ವರ್ಕೌಟ್ ಮಾಡುತ್ತಾರೆ.