ಬೆಂಗಳೂರು[ಏ.19]:  ಸಾಮಾನ್ಯವಾಗಿ ಅಧಿಕಾರದಲ್ಲಿ ಮೇಲಿರುವ ವ್ಯಕ್ತಿಗಳು ತಮ್ಮ ಕೈ ಕೆಳಗಿನ ಸಿಬ್ಬಂದಿಯನ್ನು ಸಮಾನವಾಗಿ ನೋಡುವುದು ತುಂಬಾನೇ ಕಡಿಮೆ. ಆದರೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಹೆಸರು ಗಳಿಸಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಈ ಮಾತಿಗೆ ಭಿನ್ನವಾಗಿ ನಿಲ್ತಾರೆ ಅನ್ನೋದಕ್ಕೆ ಅವರು ಮಾಡಿರುವ ಟ್ವೀಟ್​ವೊಂದು ಸಾಕ್ಷಿಯಾಗಿದೆ.

ಹೋಮ್‌ ಗಾರ್ಡ್‌ಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿರುವ ಸಿಂಗಂ, ಲೋಕಸಭಾ ಚುನಾವಣೆ ಮತ್ತು ಯಾವುದೇ ಚುನಾವಣೆ ಬಂದ್ರೆ ಅದರ ಹೀರೋಗಳೆಂದರೆ ನಮ್ಮ ಹೋಮ್‌ ಗಾರ್ಡ್‌ಗಳು ಅಂತಾ ಟ್ವಿಟ್ಟರ್​ನಲ್ಲಿ ಪೋಸ್ಟ್​ವೊಂದನ್ನ ಹಾಕಿದ್ದಾರೆ. 

ಶ್ರಮವರಿಯದ ಯುದ್ಧ ವೀರರೆಂದರೆ ಕಾರ್ಪೆಂಟರ್ಸ್‌, ಕೂಲಿ ಕಾರ್ಮಿಕರು, ಡ್ರೈವರ್ಸ್‌, ಇತ್ಯಾದಿ. ಆದ್ರೆ ಅವರೆಲ್ಲರಿಗಿಂತ ಮಿಗಿಲಾದ ಕೆಲಸವೆಂದರೆ ಹೋಮ್‌ಗಾರ್ಡ್ ಕೆಲಸ ಅವರಿಗೆ ಗೌರವವನ್ನು ನೀಡಲೇಬೇಕು ಅಂತಾ ಅಭಿಪ್ರಾಯ ಪಟ್ಟಿರುವ ಅಣ್ಣಾಮಲೈ, ಚುನಾವಣೆಯಲ್ಲಿ ಶ್ರಮಿಸಿದ ಹೋಮ್​ಗಾರ್ಡ್ಸ್​​ನೊಂದಿಗೆ ಸೆಲ್ಫಿಗೆ ಪೋಸ್​ ಕೊಟ್ಟಿರುವುದು, ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.