ಹಿಂಸೆಯಿಂದ ನೀರು ಸಿಗುವುದಿಲ್ಲ, ಅಮಾಯಕರ ಪ್ರಾಣ ಹೋಗುತ್ತದೆ
ಬೆಂಗಳೂರು(ಸೆ.12): ಕಾವೇರಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತ'ವಾಗುತ್ತಿದೆ. ಕನ್ನಡ ನಟರಾದ ಸುದೀಪ್, ರಮ್ಯಾ ಸೇರಿದಂತೆ ಟ್ವಿಟರ್'ನಲ್ಲಿ ಹಲವರು ಸರ್ಕಾರ ಗಲಭೆಯನ್ನು ನಿಯಂತ್ರಿಸಬೇಕೆಂದು ಮನವಿ ಮಾಡಿರುವುದಲ್ಲದೆ ಹಿಂಸೆಯಿಂದ ಕಾವೇರಿ ನೀರು ಸಿಗುವುದಿಲ್ಲ ಅಮಾಯಕರ ಪ್ರಾಣ ಮಾತ್ರ ಹೋಗುತ್ತದೆ ಎಂದು ತಿಳಿಸಿದ್ದಾರೆ. ಗಲಭೆ ನಿಯಂತ್ರಿಸಲು ಕೆಲವರು ಮಂಡಿಸಿರುವ ಅಭಿಪ್ರಾಯಗಳು ಹೀಗಿವೆ ನೋಡಿ.
ಸುದೀಪ್
' ನಮಗೆ ನ್ಯಾಯ ಬೇಕು. ಆದರೆ, ಹೀಗೆ ಹಿಂಸೆ ಮಾಡಬೇಡಿ. ಪ್ರಚೋದನಕಾರಿ ಸಾಲುಗಳನ್ನು ಬರೀಬೇಡಿ
https://twitter.com/KicchaSudeep
ರಮ್ಯಾ
ಸಮಸ್ಯೆಗೆ ಹಿಂಸೆ ಉತ್ತರವಲ್ಲ. ಹಿಂಸೆಯಿಂದ ಹಿಂಸೆ ಹೆಚ್ಚಾಗುತ್ತದೆ ೆಂದಿರುವುದ ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪಿ'ನಿಂದ ಮನಸ್ಸಿಗೆ ನೋವಾಗಿದೆ. ಪ್ರಧಾನ ಮಂತ್ರಿಗಳು ಕೂಡಲೆ ಮಧ್ಯ ಪ್ರವೇಶಿಸಬೇಕು'
https://twitter.com/divyaspandana
--
Fictionist @dream_wala
'ಶಾಂತಿಪ್ರಿಯ ಬೆಂಗಳೂರು ಜನರಿಂದ ಈ ರೀತಿಯ ಘಟನೆಗಳನ್ನು ನಿರೀಕ್ಷಿಸಿರಲಿಲ್ಲ.
Chetan Srivatsa @Chetzzzzzz
ಈ ಮೂರ್ಖರು ಗಲಭೆಯನ್ನು ಪ್ರೇರೇಪಿಸುತ್ತಾರೆ ವಿನಃ ರೈತರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಮಾಡುವುದಿಲ್ಲ
Ashwin @StubbornManager
ಗಲಭೆಯು ತಮಿಳರು ಹಾಗೂ ಕನ್ನಡಿಗರಾದ ಇಬ್ಬರಿಗೂ ಒಳ್ಳೆಯದಲ್ಲ. ಮಾಧ್ಯಮಗಳು ಎರಡೂ ಕಡೆಯವರೆಗೆ ಗಲಭೆಯನ್ನು ಪ್ರೇರೇಪಿಸುತ್ತಿರುವುದರ ಜೊತೆಗೆ ಟಿಆರ್'ಪಿ ಹೆಚ್ಚಿಸಿಕೊಳ್ಳುತ್ತಿದೆ
Apoorva Pallepati @appy18fizz
ಹಲ್ಲೆ ಮಾಡುವುದರಿಂದ ನೀವು ನೀರು ಪಡೆಯಲು ಸಾಧ್ಯವಿಲ್ಲ ಹರಿಯುತ್ತಿರುವ ಜಲಾಶಯದ ಗೇಟ್'ಗಳನ್ನು ತಡೆಯಲೂ ಸಾಧ್ಯವಿಲ್ಲ
