ಶಬರಿಮಲೆ ಮಹಿಳೆ ಪ್ರವೇಶ: ಪ್ಲ್ಯಾನ್ ಸಿ ಅಂದ್ರೆ ರಕ್ತಪಾತ ಎಂದ ರಾಹುಲ್!
ಶಬರಿಮಲೆ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆ! ಮಹಿಳೆ ಪ್ರವೇಶವಾಗಿದ್ದರೆ ಭಕ್ತರು ರಕ್ತಪಾತ ನಡೆಸುತ್ತಿದ್ದರು! ಶಬರಿಮಲೆ ಹೋರಾಟಗಾರ ರಾಹುಲ್ ಈಶ್ವರ್ ವಿವಾದಾತ್ಮಕ ಹೇಳಿಕೆ! ಪ್ಲ್ಯಾನ್ ಎ, ಪ್ಯ್ಲಾನ್ ಸಿ ಯೋಜನೆ ಅನುಷ್ಠಾನವಾಗುತ್ತಿತ್ತು! ನಮ್ಮ ನಂಬಿಕೆ ಮೇಲೆ ದಾಳಿ ನಡೆದರೆ ರಕ್ತಪಾತ ಖಚಿತ
ತಿರುವನಂತಪುರಂ(ಅ.25): ಶಬರಿಮಲೆ ಬೆಟ್ಟದ ಮೇಲೆ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಅರೋಪದ ಮೇಲೆ ಬಂಧಿತರಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಹೋರಾಟಗಾರ ರಾಹುಲ್ ಈಶ್ವರ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಒಂದು ವೇಳೆ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡಿದ್ದೇ ಆದಲ್ಲಿ ಹೋರಾಟಗಾರರು ರಕ್ತಪಾತ ಮಾಡಲು ತಯಾರಿ ನಡೆಸಿದ್ದರು ಎಂದು ರಾಹುಲ್ ಈಶ್ವರ್ ಹೇಳಿಕೆ ನೀಡಿದ್ದಾರೆ.
ಅಯ್ಯಪ್ಪ ಭಕ್ತರ ನಂಬಿಕೆ ಮತ್ತು ಸಂಪ್ರದಾಯವನ್ನು ಯಾರಾದರೂ ಪ್ರಶ್ನಿಸಿದ್ದರೆ, ಭಕ್ತರು ರಕ್ತಪಾತ ನಡೆಸಲು ಸಿದ್ಧತೆ ನಡೆಸಿದ್ದರು ಎಂದು ರಾಹುಲ್ ಈಶ್ವರ್ ಹೇಳಿದ್ದಾರೆ.
ಶಬರಿಮಲೆಗೆ ಮಹಿಳೆಯರು ಬರದಂತೆ ತಡೆಯಲು ನಮ್ಮ ಬಳಿ ಹಲವು ಯೋಜನೆಗಳಿದ್ದು, ಈಗಾಗಲೇ ಪ್ಲ್ಯಾನ್ ಎ ಯಶಸ್ವಿಯಾಗಿದೆ. ಒಂದು ವೇಳೆ ಮೊದಲ ಹಂತದ ಯೋಜನೆ ವಿಫಲಗೊಂಡಿದ್ದರೆ ಪ್ಲ್ಯಾನ್ ಬಿ ಮತ್ತು ಪ್ಲ್ಯಾನ್ ಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿತ್ತು ಎಂದು ರಾಹುಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.