ಹಾಂಕಾಂಗ್‌[ಆ.19]: ಹಾಂಕಾಂಗ್‌ ಮೇಲೆ ಚೀನಾ ಪಾರುಪತ್ಯ ಸಾಧಿಸಲು ಹೊರಟಿರುವುದನ್ನು ವಿರೋಧಿಸಿ ಕಳೆದ 10 ವಾರಗಳಿಂದ ನಡೆಯುತ್ತಿರುವ ಪ್ರಜಾಪ್ರಭುತ್ವ ಹೋರಾಟ ಭಾನುವಾರ ಮತ್ತಷ್ಟುತೀವ್ರಗೊಂಡಿದ್ದು, ಹಾಕಾಂಗ್‌ ಬೀದಿಗಳಲ್ಲಿ ಭಾನುವಾರ ಸಾಗರೋಪಾದಿಯಲ್ಲಿ ಹೋರಾಟಗಾರರು ಸೇರಿ ಶಾಂತ ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ಲಕ್ಷಾಂತರ ಮಂದಿ ಪ್ರತಿಭಟನೆ ನಡೆಸಿದರೂ ಯಾವುದೇ ಅಹಿತಕರ ಘಟನೆ ನಡೆಸಿದ್ದು ವರದಿಯಾಗಿಲ್ಲ.

ಹಾಂಕಾಂಗ್‌ ಪ್ರಕ್ಷುಬ್ಧ: ಗಡಿಗೆ ಬಂತು ಚೀನಾ ಸೇನೆ

ನಗರದ ವಿಕ್ಟೋರಿಯಾ ಪಾರ್ಕ್ನಿಂದ ಆರಂಭವಾದ ಪ್ರತಿಭಟನೆ, ಧಾರಾಕಾರ ಮಳೆ ಹಾಗೂ ಪೊಲೀಸ್‌ ಅದೇಶವನ್ನೂ ಲೆಕ್ಕಿಸದೇ ಮುನ್ನಡೆಯಿತು. ಇದು ತರ್ಕಬದ್ಧ ಹಾಗೂ ಅಹಿಂಸಾತ್ಮಕ ಚಳುವಳಿಯಾಗಿದ್ದು, ನಾವು ಇದರಿಂದ ಶಿಕ್ಷಿತರಾಗುವುದರ ಜತೆಗೆ ಚಳುವಳಿ ಹೆಚ್ಚಿನ ಜನಾಕರ್ಷಣೆ ಪಡೆಯುತ್ತಿದೆ ಎಂದು ಹೋರಾಟಗಾರರು ಹೇಳಿದ್ದಾರೆ.

ಭಾರೀ ಜನಸಂಖ್ಯೆಯನ್ನು ನಿಯಂತ್ರಿಸಲು ಹಾಕಾಂಗ್‌ ಪೊಲೀಸರು ಅಶ್ರುವಾಯು ಹಾಗೂ ರಬ್ಬರ್‌ ಗುಂಡುಗಳನನು ಪ್ರಯೋಗಿಸಿದ್ದು ಹೋರಾಟಗಾರರ ಅಸಹನೆ, ಆಕ್ರೋಶಕ್ಕೆ ಕಾರಣವಾಗಿದೆ. ನಾವು ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ನಮ್ಮ ಕೂಗು ಸರ್ಕಾರಕ್ಕೆ ಕೇಳಿಸಲಿದೆ ಎಂದು ಭಾವಿಸುತ್ತೆವೆ ಎಂದು ಹೋರಾಟಗಾರರು ಹೇಳಿದ್ದಾರೆ. ಸಮಾರು 10 ಲಕ್ಷಕ್ಕೂ ಅಧಿಕ ಪ್ರತಿಭಟನೆಕಾರರು ಬೀದಿಗಿಳಿದು ಚೀನಾ ವಿರುದ್ಧ ಘೋಷಣೆಗನ್ನು ಕೂಗಿದ್ದಾರೆ.

ನಮ್ಮ ಬಳಿ ಬೇಕಾದ ಅಸ್ತ್ರಗಳಿವೆ, ಆದರೆ ಅದನ್ನು ಬಳಸಲು ನಮಗೆ ಇಷ್ಟವಿಲ್ಲ. ಪ್ರತಿಭಟನಾಕಾರರಿಗೆ ತಮ್ಮ ಅಭಿಪ್ರಾಯಗಳನ್ನು ಶಾಂತಿಯುತ ಮತ್ತು ತರ್ಕಬದ್ಧ ರೀತಿಯಲ್ಲಿ ವ್ಯಕ್ತಪಡಿಸಬೇಕು. ತಾಳ್ಮೆಯಿಂದ ಕಾನೂನುಬಾಹಿರ ಕೃತ್ಯಗಳನ್ನು ನಿರ್ವಹಿಸಿದ್ದಕ್ಕಾಗಿ ಪೊಲೀಸರಿಗೆ ಅಭಿನಂದನೆಗಳು ಎಂದು ಹಾಂಕಾಂಗ್‌ ವಕ್ತಾರ ಹೇಳಿದ್ದಾರೆ.

ಹಾಂಕಾಂಗ್‌ ಪ್ರಕ್ಷುಬ್ಧ: ಗಡಿಗೆ ಬಂತು ಚೀನಾ ಸೇನೆ

ಶನಿವಾರ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದ ಪ್ರತಿಭಟನೆ ಭಾನುವಾರ ಶಾಂತ ರೂಪ ತಾಳಿತ್ತು. ಶನಿವಾರ ಸರ್ಕಾರದ ಪರ ಹೋರಾಟಗಾರರು ಕೂಡ ಬೀದಿಗಿಳಿದಿದ್ದು ಚೀನಾ ಧ್ವಜ ಹಾಗೂ ಚೀನಾ ಪರ ಘೋಷಣೆಗಳನ್ನು ಕೂಗಿ ಸರ್ಕಾರದ ಬೆಂಬಲಕ್ಕೆ ನಿಂತಿದ್ದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಮಧ್ಯೆ ಹಾಂಕಾಂಗ್‌ ಗಡಿಯ ಶೆನ್ಜಾನ್‌ ನಗರದಲ್ಲಿ ಚೀನಾ ಭಾರೀ ಪ್ರಮಾಣದಲ್ಲಿ ಸೇನೆ ಜಮಾವಣೆ ಮಾಡಿತ್ತು. ಚೀನಾದ ಈ ನಿಲುವು ವಿಶ್ವ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಅಮೆರಿಕಾ ಈಗಾಗಲೇ ಎಚ್ಚರಿಕೆ ನೀಡಿದೆ. ಇದು ಹೀಗೆ ಮುಂದುವರಿದರೆ ಚೀನಾಗೆ ಆರ್ಥಿಕ ಹೊಡೆತ ಬೀಳಲಿದೆ ಎಂದು ಅಂದಾಜಿಲಾಗಿದೆ.