ಧಾರವಾಡ (ಸೆ.21): ಕಾವೇರಿ ನೀರು ಹಂಚಿಕೆಯಲ್ಲಾದ ಅನ್ಯಾಯ ಹಾಗೂ ಮಹದಾಯಿ ವಿವಾದ ಇತ್ಯರ್ಥಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಳಂಬ ಧೋರಣೆ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘಟನೆಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿದವು.

ಪ್ರಧಾನ ಮಂತ್ರಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸೇರಿದಂತೆ ಬಿಜೆಪಿ ಮುಖಂಡರುಗಳಾದ ಭಾವಚಿತ್ರಗಳಿಗೆ ಪ್ರತಿಭಟನಾಕಾರರು ಸೆಗಣಿ ನೈವೇದ್ಯ ನಡೆಸಿದರು.

ಸೆಗಣಿ ಬಳಿದ ಭಾವಚಿತ್ರಗಳನ್ನು ಕಾಲಲ್ಲಿ ತುಳಿದ ಹಾಕುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.