ಚಿಕ್ಕಮಗಳೂರು ಮೂಲದ ಗಣೇಶ್ ಎಂಬಾತ ತಿಪಟೂರಿನ ಸರ್ಕಾರಿ ಆಸ್ಪತ್ರೆಯ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದ. ಆಸ್ಪತ್ರೆ ಸಿಬ್ಬಂದಿ ಕಾಂಡೂಮ್  ಖಾಲಿಯಾಗಿದೆ ಅಂತ ಉತ್ತರಕೊಟ್ಟಿದ್ದಕ್ಕೆ ರೊಚ್ಚಿಗೆದ್ದ ಗಣೇಶ್ ಆಸ್ಪತ್ರೆ ಎದುರು ಪ್ರತಿಭಟಿಸಿದ್ದಾನೆ.

ತುಮಕೂರು(ಜು.12): ಇದೊಂದು ವಿಚಿತ್ರ ಪ್ರತಿಭಟನೆ, ತಿಪಟೂರು ಸರ್ಕಾರಿ ಆಸ್ಪತ್ರೆ ಮುಂಭಾಗ ಮಹಾಶಯನೊಬ್ಬ ಉಚಿತ ಕಾಂಡೂಮ್ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾನೆ.

ಚಿಕ್ಕಮಗಳೂರು ಮೂಲದ ಗಣೇಶ್ ಎಂಬಾತ ತಿಪಟೂರಿನ ಸರ್ಕಾರಿ ಆಸ್ಪತ್ರೆಯ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದ. ಆಸ್ಪತ್ರೆ ಸಿಬ್ಬಂದಿ ಕಾಂಡೂಮ್ ಖಾಲಿಯಾಗಿದೆ ಅಂತ ಉತ್ತರಕೊಟ್ಟಿದ್ದಕ್ಕೆ ರೊಚ್ಚಿಗೆದ್ದ ಗಣೇಶ್ ಆಸ್ಪತ್ರೆ ಎದುರು ಪ್ರತಿಭಟಿಸಿದ್ದ. 

ಸದ್ಯ ಇದೀಗ ಆಸ್ಪತ್ರೆಯ ಸಿಬ್ಬಂದಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಗಣೇಶ್​ ಪ್ರತಿಭಟನೆ ಕೈ ಬಿಟ್ಟಿದ್ದಾನೆ.