ವಿಜಯಪುರ, [ಮಾ.02]: ಶಿಕ್ಷಕರು ಅಂದ್ರೆ ದೇವರ ಸಮಾನ ಅಂತಾರೆ, ಆದರೆ ಇಲ್ಲೊಬ್ಬ ಶಿಕ್ಷಕ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದಾನೆ.

ಗೃಹ ಸಚಿವ ಎಮ್. ಬಿ. ಪಾಟೀಲ್ ಮಾಲೀಕತ್ವದ ಬಿ.ಎಲ್.ಡಿ.ಇ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕ ಸಂದೀಪ್ ಎನ್ನುವಾತ ದೇಶದ್ರೋಹಿ ಕೆಲಸ ಮಾಡಿದ್ದಾನೆ.

ಪುಲ್ವಾಮಾ ದಾಳಿ ಬಳಿಕ ಭಾರತ-ಪಾಕ್ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪಾಕ್ ನ ಉಗ್ರ ಕೃತ್ಯವನ್ನು ಇಡೀ ದೇಶವೇ ಖಂಡಿಸಿ ಆಕ್ರೋಶ ವ್ಯಕ್ತಪಡಿಸುತ್ತಿದೆ. 

 ಪಾಕ್ ಸೇನೆ ಬೆಂಬಲಿಸಿ ಪೋಸ್ಟ್ : ಬಳ್ಳಾರಿ ಯುವಕ ಅರೆಸ್ಟ್

ಹೀಗಿರುವಾಗ ಬಿ.ಎಲ್.ಡಿ.ಇ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕ ಸಂದೀಪ್, ಫೇಸ್ ಬುಕ್ ನಲ್ಲಿ ಬಿಜೆಪಿಯನ್ನು ಟೀಕಿಸಲು ಹೋಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪರ ಬ್ಯಾಟಿಂಗ್ ಮಾಡಿದ್ದಾರೆ.
 
ಇದ್ರಿಂದ ಸಾಮಾಜಿಲ ಜಾಲತಾಣಗಳಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದು, ಕಾಲೇಜಿನಿಂದ ಅಧ್ಯಾಪಕನನ್ನು ಹೊರಹಾಕಬೇಕು ಹಾಗೂ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಆಗ್ರಹಿಸಿ ಬಿ.ಎಲ್.ಡಿ ಕಾಲೇಜು ಎದುರು ಪ್ರತಿಭಟನೆ ಸಹ ನಡೆಯುತ್ತಿದೆ.