ವಿಜಯದಶಮಿ ರಾತ್ರಿ ದುಷ್ಕಮಿ೯ಗಳಿಂದ ಕೃತ್ಯ | ಸ್ಥಳದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ | ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
ಕಲಬುರಗಿ (ಅ.12): ದುಷ್ಕರ್ಮಿಗಳು ಶ್ರೀರಾಮನ ಭಾವಚಿತ್ರಕ್ಕೆ ಸೆಗಣಿ ಎರಚಿರುವ ಘಟನೆ ಗುಲಬರ್ಗ ಜಿಲ್ಲೆಯ ಶಹಬಾದ್ ಪಟ್ಟಣದಲ್ಲಿ ನೆಡೆದಿದೆ.
ವಿಜಯದಶಮಿಯ ದಿನ ರಾತ್ರಿ ಈ ಘಟನೆ ನೆಡೆದಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ. ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಬೈಕ್ ಗೆ ಬೆಂಕಿ ಹಚ್ಚಿ ಭಾರಿ ಪ್ರತಿಭಟನೆ ನೆಡೆಸುತ್ತಿವೆ.
ಸದ್ಯ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
