ಸ್ವಂತ ಮನೆಯ ಆಸೆ ಹುಟ್ಟಿಸಿ ಸಾವಿರಾರು ಜನರಿಗೆ ಮೋಸ ಮಾಡಿರುವ ಸಚಿನ್​​ ನಾಯಕ್​ ವಿರುದ್ಧ ಹೋರಾಟ ಮತ್ತಷ್ಟು ಜೋರಾಗಿದೆ. ಇಂದು ಸಾವಿರಾರು ಮಂದಿ ಗ್ರಾಹಕರು ಒಂದೆಡೆ ಸೇರಲಿದ್ದು, ಹೋರಾಟದ ರೂಪರೇಷೆ ನಿರ್ಧರಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಈ ಹೋರಾಟದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಬೆಂಗಳೂರು(ಜ.25): ಸ್ವಂತ ಮನೆಯ ಆಸೆ ಹುಟ್ಟಿಸಿ ಸಾವಿರಾರು ಜನರಿಗೆ ಮೋಸ ಮಾಡಿರುವ ಸಚಿನ್​​ ನಾಯಕ್​ ವಿರುದ್ಧ ಹೋರಾಟ ಮತ್ತಷ್ಟು ಜೋರಾಗಿದೆ. ಇಂದು ಸಾವಿರಾರು ಮಂದಿ ಗ್ರಾಹಕರು ಒಂದೆಡೆ ಸೇರಲಿದ್ದು, ಹೋರಾಟದ ರೂಪರೇಷೆ ನಿರ್ಧರಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಈ ಹೋರಾಟದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಇಂದು ಒಂದೆಡೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚೆ

12 ಸಾವಿರಕ್ಕೂ ಹೆಚ್ಚು ಜನರಿಂದ ಸಾವಿರಾರು ಕೋಟಿ ಪಡೆದು ವಂಚಿಸಿದ್ದ ಡ್ರೀಮ್ಸ್​ ಜಿಕೆ ಕಂಪನಿ ಮಾಲೀಕ ಸಚಿನ್​​ ನಾಯಕ್ ವಿರುದ್ಧ ಸಂಘಟಿತ ಹೋರಾಟ ಆರಂಭವಾಗಿದೆ. ಲಕ್ಷಾಂತರ ರೂಪಾಯಿ ಕಳೆದುಕೊಂಡ ಸಾವಿರಾರು ಜನರು ಈಗಾಗಲೇ ಸಿಎಂ, ಗೃಹಸಚಿವರು, ಬೆಂಗಳೂರು ಪೊಲೀಸ್​ ಆಯುಕ್ತರ ಗಮನ ಸೆಳೆದಿದ್ದು, ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಒಂದು ಹಂತಕ್ಕೆ ನ್ಯಾಯದ ಭರವಸೆ ಪಡೆದುಕೊಂಡಿರುವ ಈ ಗ್ರಾಹಕರು ಒಂದೆಡೆ ಸೇರಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದಾರೆ. 

ಇದೇ ಹಿನ್ನೆಲೆಯಲ್ಲಿ ರಾಜಾಜಿನಗರದ ವೆಸ್ಟ್​ ಆಫ್​ ಕಾರ್ಡ್​ ರಸ್ತೆಯಲ್ಲಿರುವ ಚನ್ನಕೇಶವ ಕಲ್ಯಾಣ ಮಂಟಪದಲ್ಲಿ ಇಂದು ಸಭೆ ನಡೆಯಲಿದೆ. ಸ್ವಾತಂತ್ರ ಹೋರಾಟಗಾರ ಹೆಚ್​.ಎಸ್​.ದೊರೆಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಾನೂನು ಹೋರಾಟ ಸೇರಿದಂತೆ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಯಲಿದೆ. ಈ ಸಂಬಂಧ ಬೆಂಗಳೂರಿನ ಬಹುತೇಕ ಗ್ರಾಹಕರು ಬಾಗವಹಿಸಲಿದ್ದು, ಬೇರೆ ಬೇರೆ ಜಿಲ್ಲೆಗಳಲ್ಲಿರುವ ಗ್ರಾಹಕರೂ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ಹಣ ಕಳೆದುಕೊಂಡವರ ದಿಟ್ಟ ಹೋರಾಟಕ್ಕೆ ಈಗಾಗಲೇ ಹೆದರಿರುವ ಸಚಿನ್​ ನಾಯ್ಕ್ ರಾಜ್ಯ ಬಿಟ್ಟು ಪರಾರಿಯಾಗಿದ್ದಾನೆ. ಮೋಸಹೋದ ಗ್ರಾಹಕರು ಕಾನೂನು ಮೂಲಕ ತಮ್ಮ ಹಣವನ್ನು ಹಿಂಪಡೆಯಲು ದಿಟ್ಟ ಹೆಜ್ಜೆ ಇಟ್ಟಿದ್ದು, ಪೊಲೀಸ್​ ಇಲಾಖೆ ಕೂಡ ಗ್ರಾಹಕರ ಬೆಂಬಲಕ್ಕೆ ಬಂದಿದೆ.