ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿರುದ್ಧ ಕರಪತ್ರಗಳನ್ನು ಮುದ್ರಿಸಿ ಬುಧವಾರ ವಿಧಾನಸೌಧದ ಶೌಚಾಲಯಗಳಲ್ಲಿ ಹಾಕಿ ಪ್ರತಿಭಟಿಸಲಾಗಿದೆ. ಸಚಿವರು ಶಿವಮೊಗ್ಗದ ಸಾಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಬ್ರಾಹ್ಮಣರೂ ಮಾಂಸ ತಿನ್ನುತ್ತಿದ್ದರು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು ಎನ್ನಲಾಗಿತ್ತು.

ಬೆಂಗಳೂರು: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿರುದ್ಧ ಕರಪತ್ರಗಳನ್ನು ಮುದ್ರಿಸಿ ಬುಧವಾರ ವಿಧಾನಸೌಧದ ಶೌಚಾಲಯಗಳಲ್ಲಿ ಹಾಕಿ ಪ್ರತಿಭಟಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಚಿವರು ಶಿವಮೊಗ್ಗದ ಸಾಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಬ್ರಾಹ್ಮಣರೂ ಮಾಂಸ ತಿನ್ನುತ್ತಿದ್ದರು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು ಎನ್ನಲಾಗಿತ್ತು.

ಈ ಹಿನ್ನೆಲೆಯಲ್ಲಿ ಕೆಲವು ಅಪರಿಚಿತರು ವಿಧಾನಸೌಧದ ಎಲ್ಲಾ ಮಹಡಿಗಳ ಶೌಚಾಲಯದಲ್ಲೂ ಸಚಿವರ ವಿರುದ್ಧದ ಕರಪತ್ರಗಳನ್ನು ಹಾಕಿ ಹೋಗಿದ್ದಾರೆ.

ಆ ಕರಪತ್ರಗಳಲ್ಲಿ ಸಚಿವ ಕಾಗೋಡು ಅವರು ಚಿತ್ರ ಪ್ರಕಟಿಸಿದ್ದಾರೆ. ಅದರ ಮೇಲೆ ‘ಬ್ರಾಹ್ಮಣರನ್ನು ನಿಂದಿಸಿದ್ದಕ್ಕೆ’ ಎಂದು ಬರೆಯಲಾಗಿದೆ.