ಈ ಕಾರ್ಯಕ್ರಮ ಮುಗಿದು ಇನ್ನೇನು ಹೊರಡಬೇಕು ಎನ್ನುವಾಗ ಕೋಲಿ ಸಮುದಾಯದ ಕೆಲ ಮುಖಂಡರು ತಮಗೂ ರಾಮ್ನಾಥ್ ಕೋವಿಂದ್ ಅವರ ಭೇಟಿಗೆ ಅವಕಾಶ ಕೊಡಿ ಅಂತ ಕೇಳಿದ್ದಾರೆ.
ಬೆಂಗಳೂರು(ಜು.05): ಮಾಜಿ ಸಚಿವ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಇಂದು ಎನ್'ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ನಾಥ್ ಕೋವಿಂದ್ ಅವರ ಬೆಂಗಳೂರು ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿ ವಹಿಸಿದ್ದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ರಾಮ್ನಾಥ್ ಕೋವಿಂದ್ ಆಗಮಿಸಿ ತಮ್ಮ ಪರ ಮತ ಚಲಾಯಿಸುವಂತೆ ಬಿಜೆಪಿಯ ಹಾಗೂ ತಮಗೆ ಬೆಂಬಲ ವ್ಯಕ್ತಪಡಿಸಿದ ಎಲ್ಲ ಪ್ರಮುಖರಿಗೆ ಮನವಿ ಮಾಡಿದರು.ಈ ಕಾರ್ಯಕ್ರಮ ಮುಗಿದು ಇನ್ನೇನು ಹೊರಡಬೇಕು ಎನ್ನುವಾಗ ಕೋಲಿ ಸಮುದಾಯದ ಕೆಲ ಮುಖಂಡರು ತಮಗೂ ರಾಮ್ನಾಥ್ ಕೋವಿಂದ್ ಅವರ ಭೇಟಿಗೆ ಅವಕಾಶ ಕೊಡಿ ಅಂತ ಕೇಳಿದ್ದಾರೆ. ಅವಕಾಶ ಸಿಕ್ಕದಿದ್ದಾಗ ತಳ್ಳಾಟ ನೂಕಾಟ ನಡೆಯಿತು.
ಆದರೆ ಲಿಂಬಾವಳಿ ಅವರು ಹೇಳುವ ಪ್ರಕಾರ, ಅವರ ಮೇಲೆ ಯಾವುದೇ ಹಲ್ಲೆ ಯತ್ನ ನಡೆದಿಲ್ಲ. ರಾಮ್ನಾಥ್ ಕೋವಿಂದ್ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ತೆರಳಲು ತಡವಾದ ಕಾರಣ ಯಾರನ್ನೂ ಭೇಟಿ ಮಾಡದಿರುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದ್ದರಿಂದ ಅವರ ಭೇಟಿಗೆ ಅವಕಾಶ ನಿರಾಕರಿಸಲಾಯಿತು ಎನ್ನುವುದು ಲಿಂಬಾವಳಿ ಅವರ ಸ್ಪಷ್ಟನೆ.ಒಟ್ಟಾರೆ, ರಾಷ್ಟ್ರೀಯ ಪ್ರಜಸತ್ತಾತ್ಮಕ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮ್ನಾಥ್ ಕೋವಿಂದ್ ಅವರ ಬೆಂಗಳೂರು ಭೇಟಿ ಕಾರ್ಯಕ್ರಮ ತಳ್ಳಾಟ, ನೂಕಾಟ, ವಾಗ್ದಾದಕ್ಕೂ ಸಾಕ್ಷಿಯಾಯ್ತು.
