Asianet Suvarna News Asianet Suvarna News

ವೇಶ್ಯಾವಾಟಿಕೆ ಅಪರಾಧವಲ್ಲವೇ? ಹೈಕೋರ್ಟ್ ನೀಡಿದೆ ಇಂಟರೆಸ್ಟಿಂಗ್ ತೀರ್ಪು

ಆರೋಪದಲ್ಲಿ ಯಾವುದೇ ಹುರುಳಿಲ್ಲ. ತನಗೆ ನ್ಯಾಯ ಕೊಡಿಸಿ ಎಂದು ವಿನೋದ್ ಪಟೇಲ್ ಅವರು ಗುಜರಾತ್ ಹೈಕೋರ್ಟ್'ನ ಮೊರೆಹೋಗಿದ್ದರು. ವಿಚಾರಣೆ ಆಲಿಸಿದ ನ್ಯಾ| ಜೆ.ಬಿ.ಪಾರ್ದಿವಾಲಾ ಅವರಿದ್ದ ಹೈಕೋರ್ಟ್ ಪೀಠವು ವಿನೋದ್ ಪಟೇಲ್ ವಾದವನ್ನು ಪುರಸ್ಕರಿಸಿ, ಐಪಿಸಿ ಸೆಕ್ಷನ್ 370ರ ಲೋಪದೋಷವನ್ನು ಎತ್ತಿಹಿಡಿಯಿತು.

prostitution not a crime if sex worker not forced into it says gujarat hc
  • Facebook
  • Twitter
  • Whatsapp

ಅಹ್ಮದಾಬಾದ್(ಮೇ 06): ಸ್ವಯಿಚ್ಛೆಯಿಂದ ಮಾಂಸದಂಧೆಯಲ್ಲಿ ಭಾಗಿಯಾಗುವುದರಲ್ಲಿ ಯಾವ ತಪ್ಪು ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಯಾವುದೇ ರೀತಿಯ ಬಲವಂತಕ್ಕೆ ಒಳಗಾಗದೇ ವೇಶ್ಯಾವಾಟಿಕೆಯಲ್ಲಿ ತೊಡಗಿದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗದು ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ.

ವೇಶ್ಯಾಗೃಹದ ಮೇಲೆ ನಡೆದ ರೇಡ್'ನಲ್ಲಿ ಸಿಕ್ಕಿಬಿದ್ದಿದ್ದ ಗ್ರಾಹಕ ವಿನೋದ್ ಪಟೇಲ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ರೀತಿಯ ಅಭಿಪ್ರಾಯಪಟ್ಟಿದೆ. ವಿನೋದ್ ಪಟೇಲ್ ಇದೇ ಜ. 3ರಂದು ಸೂರತ್'ನ ವೇಶ್ಯಾಗೃಹಕ್ಕೆ ಭೇಟಿಕೊಟ್ಟಿದ್ದರು. ಆಗ ಪೊಲೀಸರು ರೇಡ್ ಮಾಡಿದಾಗ ವಿನೋದ್ ಪಟೇಲ್ ಸೇರಿ ಐವರನ್ನು ಬಂಧಿಸಲಾಗಿತ್ತು. ಪೊಲೀಸರು ಐಪಿಸಿ ಸೆಕ್ಷನ್ 370ರ ಅಡಿಯಲ್ಲಿ ಈ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ತಾನು ಯಾವುದೇ ಸೆಕ್ಸ್ ವರ್ಕರ್ ಜೊತೆಯಾಗಲೀ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಜೊತೆಯಾಗಲೀ ಇದ್ದರಿಲಿಲ್ಲ. ನನ್ನ ಸರದಿಗಾಗಿ ಕಾಯುತ್ತಾ ಇದ್ದೆನಷ್ಟೇ. ಹೀಗಾಗಿ ವೇಶ್ಯಾವಾಟಿಕೆಯಲ್ಲಿ ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ ನಾನು ನಡೆದುಕೊಳ್ಳುತ್ತಿದ್ದೆನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತನಗೆ ನ್ಯಾಯ ಕೊಡಿಸಿ ಎಂದು ವಿನೋದ್ ಪಟೇಲ್ ಅವರು ಗುಜರಾತ್ ಹೈಕೋರ್ಟ್'ನ ಮೊರೆಹೋಗಿದ್ದರು. ವಿಚಾರಣೆ ಆಲಿಸಿದ ನ್ಯಾ| ಜೆ.ಬಿ.ಪಾರ್ದಿವಾಲಾ ಅವರಿದ್ದ ಹೈಕೋರ್ಟ್ ಪೀಠವು ವಿನೋದ್ ಪಟೇಲ್ ವಾದವನ್ನು ಪುರಸ್ಕರಿಸಿ, ಐಪಿಸಿ ಸೆಕ್ಷನ್ 370ರ ಲೋಪದೋಷವನ್ನು ಎತ್ತಿಹಿಡಿಯಿತು. ನಿರ್ಭಯಾ ಪ್ರಕರಣದ ನಂತರ ಕೇಂದ್ರ ಸರಕಾರ ಅಳವಡಿಸಿದ್ದ ಕಠಿಣವಾದ ಐಪಿಸಿ ಸೆಕ್ಷನ್ 370ಗೆ ತಿದ್ದುಪಡಿ ತರಲು ಶಿಫಾರಸು ಆಡಿದ್ದ ನ್ಯಾ| ಜೆಎಸ್ ವರ್ಮಾ ಆಯೋಗದ ಅಭಿಪ್ರಾಯಗಳನ್ನು ನ್ಯಾ| ಜೆ.ಬಿ.ಪಾರ್ದಿವಾಲಾ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

Follow Us:
Download App:
  • android
  • ios