ಮಹಿಳೆಯರು ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ನ್ಯಾಪ್ಕಿನ್’ಗೆ ಶೇ. 12 ಜಿಎಸ್ಟಿ ವಿಧಿಸಿದ್ದು ವೇಶ್ಯೆಯರ ಸಿಟ್ಟಿಗೆ ಕಾರಣವಾಗಿದೆ.  ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ವೇಶ್ಯಾವಾಟಿಕೆ ಅಡ್ಡೆ ಎನಿಸಿರುವ ಕೋಲ್ಕತ್ತಾದ ಸೋನಾಗಚಿಯ ಲೈಂಗಿಕ ಕಾರ್ಯಕರ್ತರು ಪ್ಯಾಡ್’ಗಳ ಬಳಕೆಯನ್ನೇ ನಿರ್ಬಂಧಿಸುವ ಬೆದರಿಕೆ ಹಾಕಿದ್ದಾರೆ.

ಮಹಿಳೆಯರು ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ನ್ಯಾಪ್ಕಿನ್’ಗೆ ಶೇ. 12 ಜಿಎಸ್ಟಿ ವಿಧಿಸಿದ್ದು ವೇಶ್ಯೆಯರ ಸಿಟ್ಟಿಗೆ ಕಾರಣವಾಗಿದೆ. 

ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ವೇಶ್ಯಾವಾಟಿಕೆ ಅಡ್ಡೆ ಎನಿಸಿರುವ ಕೋಲ್ಕತ್ತಾದ ಸೋನಾಗಚಿಯ ಲೈಂಗಿಕ ಕಾರ್ಯಕರ್ತರು ಪ್ಯಾಡ್’ಗಳ ಬಳಕೆಯನ್ನೇ ನಿರ್ಬಂಧಿಸುವ ಬೆದರಿಕೆ ಹಾಕಿದ್ದಾರೆ.

ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಬಳಿಕ 10 ವರ್ಷಗಳ ಹಿಂದೆ ಲೈಂಗಿಕ ಕಾರ್ಯಕರ್ತೆಯರು ನ್ಯಾಪ್ಕಿನ್ ಬಳಸಲು ಶುರು ಮಾಡಿದ್ದರು.

ಆದರೆ, ಜಿಎಸ್ಟಿ ಬಳಿಕ ನ್ಯಾಪ್ಕಿನ್’ಗಳ ದರ ಭಾರೀ ಹೆಚ್ಚಳವಾಗುವುದರಿಂದ ಪ್ಯಾಡ್ ಬಹಿಷ್ಕರಿಸುವುದಾಗಿ ಹೇಳಿದ್ದಾರೆ ಎಂದು ದರ್ಬಾರ್ ಮಹಿಳಾ ಸಮನ್ಯಯ ಸಮಿತಿ ಆತಂಕ ವ್ಯಕ್ತಪಡಿಸಿದೆ.