ಕೇರಳದಲ್ಲಿ ಏಷ್ಯಾನೆಟ್ ನ್ಯೂಸ್ ಹಾಗೂ ಕರ್ನಾಟಕದಲ್ಲಿ ಸುವರ್ಣನ್ಯೂಸ್ ಮೂಲಕ ಪತ್ರಿಕೋದ್ಯಮದಲ್ಲಿ ಹೊಸ ಭಾಷ್ಯ ಬರೆದಿರುವ ಏಷ್ಯಾನೆಟ್ ಸುದ್ದಿ ಸಮೂಹವು ಆರ್ನಾಬ್ ಗೋಸ್ವಾಮಿ ನೇತೃತ್ವದಲ್ಲಿ ಅಪ್ಪಟ ಪತ್ರಿಕಾಧರ್ಮದ ಇಂಗ್ಲೀಷ್ ಸುದ್ದಿ ವಾಹಿನಿ ಮೂಲಕ ದೇಶಾದ್ಯಂತ ಸಂಚಲನಗೊಳಿಸಲಿದೆ.

ಬೆಂಗಳೂರು: ದೇಶದ ಖ್ಯಾತ ಪತ್ರಕರ್ತ ಟೈಮ್ಸ್ ನೌ ಮಾಜಿ ಆ್ಯಂಕರ್ ಆರ್ನಾಬ್ ಗೋಸ್ವಾಮಿ ನೇತೃತ್ವದಲ್ಲಿ ಹೊಸ ಸುದ್ದಿ ವಾಹಿನಿ ಅನಾವರಣಗೊಳ್ಳಲಿದೆ. ಸುವರ್ಣನ್ಯೂಸ್'ನ ಸೋದರ ಸಂಸ್ಥೆಯಾದ ಏಷ್ಯಾನೆಟ್ ನ್ಯೂಸ್ ಸರ್ವಿಸ್ "ರಿಪಬ್ಲಿಕ್" ಸುದ್ದಿ ವಾಹಿನಿಯನ್ನು ಶೀಘ್ರದಲ್ಲೇ ಆರಂಭಿಸಲಿದೆ. ಕೇರಳದಲ್ಲಿ ಏಷ್ಯಾನೆಟ್ ನ್ಯೂಸ್ ಹಾಗೂ ಕರ್ನಾಟಕದಲ್ಲಿ ಸುವರ್ಣನ್ಯೂಸ್ ಮೂಲಕ ಪತ್ರಿಕೋದ್ಯಮದಲ್ಲಿ ಹೊಸ ಭಾಷ್ಯ ಬರೆದಿರುವ ಏಷ್ಯಾನೆಟ್ ಸುದ್ದಿ ಸಮೂಹವು ಆರ್ನಾಬ್ ಗೋಸ್ವಾಮಿ ನೇತೃತ್ವದಲ್ಲಿ ಅಪ್ಪಟ ಪತ್ರಿಕಾಧರ್ಮದ ಇಂಗ್ಲೀಷ್ ಸುದ್ದಿ ವಾಹಿನಿ ಮೂಲಕ ದೇಶಾದ್ಯಂತ ಸಂಚಲನಗೊಳಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred