ಮಲ ಹೋರುವ ಪದ್ದತಿಯನ್ನ ಸರಕಾರ ನಿಷೇಧ ಮಾಡಿ ಹಲವು ವರ್ಷಗಳು ಕಳೆದ್ರೂ ಬೀದರ್ ಜಿಲ್ಲೆಯಲ್ಲಿ ಮಲ ಹೋರುವ ಪದ್ದತಿ ಇನ್ನು ಜೀವಂತವಾಗಿದೆ. ಬೀದರ್ ರೈಲು ನಿಲ್ದಾಣದ ಹತ್ತಿರ ಬಾವಿಗಿಳಿದು ಮಲ ಹೊರ ತೆಗೆಯುತ್ತಿದ್ದ ದೃಶ್ಯ ಅಮಾಯಕ ಕೂಲಿ ಕಾರ್ಮಿಕರು ಈ ಅನಿಷ್ಠ ಪದ್ದತಿ ಇನ್ನು ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿ.
ಬೀದರ್(ಮಾ.30): ಮಲ ಹೋರುವ ಪದ್ದತಿಯನ್ನ ಸರಕಾರ ನಿಷೇಧ ಮಾಡಿ ಹಲವು ವರ್ಷಗಳು ಕಳೆದ್ರೂ ಬೀದರ್ ಜಿಲ್ಲೆಯಲ್ಲಿ ಮಲ ಹೋರುವ ಪದ್ದತಿ ಇನ್ನು ಜೀವಂತವಾಗಿದೆ. ಬೀದರ್ ರೈಲು ನಿಲ್ದಾಣದ ಹತ್ತಿರ ಬಾವಿಗಿಳಿದು ಮಲ ಹೊರ ತೆಗೆಯುತ್ತಿದ್ದ ದೃಶ್ಯ ಅಮಾಯಕ ಕೂಲಿ ಕಾರ್ಮಿಕರು ಈ ಅನಿಷ್ಠ ಪದ್ದತಿ ಇನ್ನು ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿ.
ನಾಡಿನ ಜನರೆಲ್ಲ ನಿನ್ನೆ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದರೆ ಈ ಕಾರ್ಮಿಕರು ಮಾತ್ರ ಮಲಹೊರುವ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಬೀದರ್ ನಗರದ ರೈಲ್ವೆ ನಿಲ್ದಾಣ ಪಕ್ಕದಲ್ಲೇ ಶೋಷಣೆ ನಡೆಯುತ್ತಿತ್ತು. ರೈಲ್ವೇ ಇಲಾಖೆ ವ್ಯಾಪ್ತಿಯ ಈ ಕಾಮಗಾರಿಯನ್ನು ರೈಲ್ವೆ ವರ್ಕ್ ಇನ್ಸ್ಪೆಕ್ಟರ್ ಎಮ್.ಎಸ್.ಗೌಡ ಎನ್ನುವವರು ಗುತ್ತಿಗೆದಾರನೊಬ್ಬನಿಗೆ ವಹಿಸಿದ್ದರು. ಆತನ ಅಣತಿಯಂತೆ ಪುಡಿಗಾಸಿನ ಆಸೆಗಾಗಿ ಕಳೆದ ನಾಲ್ಕು ದಿನಗಳಿಂದ ಕಾರ್ಮಿಕರು ಈ ಕೆಲಸ ಮಾಡುತ್ತಿದ್ದರು.
ಆ ದೃಶ್ಯ ನೋಡಿ ಬೇಸರಗೊಂಡ ಸಾರ್ವಜನಿಕರು ಬೀದರ್ ಜಿಲ್ಲಾ ಸಶಸ್ತ್ರ ನ್ಯಾಯಾಲಯದ ನ್ಯಾಯಧೀಶರಾದ ಸಂಜೀವಕುಮಾರ ಹಂಚಾಟೆ ಅವರಿಗೆ ತಿಳಿಸಿದ್ದಾರೆ. ತಕ್ಷಣಕ್ಕೆ ನ್ಯಾಯಧೀಶರು ಸ್ಥಳಕ್ಕೆ ಭೇಟಿ ನೀಡಿದ್ದರು. ಮಾರ್ಕೆಟ್ ಠಾಣೆ ಪೊಲೀಸರು ಕೂಡಾ ಬಂದು ಪರಿಶೀಲಿಸಿದರು.
ರೈಲ್ವೇ ವರ್ಕ್ ಇನ್ಸ್ ಪೆಕ್ಟರ್ ಹಾಗೂ ಗುತ್ತಿಗೆದಾರರ ವಿರುದ್ಧ ಕಂಪ್ಲೇಂಟ್ ದಾಖಲಾಗಿದೆ. ಏನೇ ಆದರೂ ಈ ಅನಿಷ್ಟ ಪದ್ಧತಿಗೆ ನಮ್ಮ ದಿಕ್ಕಾರ.. ಜನನಾಯಕರೇ ಪುಡಿಗಾಸಿನ ಆಸೆ ತೋರಿಸಿ ಮಲ ಹೊರಿಸುವ ದೌರ್ಜನ್ಯಕ್ಕೆ ತಡೆ ಯಾವಾಗ..?
