ಜನತಾದಳ, ಜೆಡಿಎಸ್ ಹಾಗೂ ಜೆಡಿಯುನಿಂದ ತಲಾ ಒಂದೊಂದು ಬಾರಿ ಶಾಸಕರಾಗಿದ್ದರು.
ಬೆಂಗಳೂರು(ಜ. 03): ಚಿಕ್ಕಮಗಳೂರಿನಲ್ಲಿ ಇಂದು ವಿಧಿವಶರಾದ ಸಹಕಾರ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ಅವರು ರಾಜ್ಯ ಕಂಡ ಸಜ್ಜನ ಹಾಗೂ ಉತ್ತಮ ರಾಜಕಾರಣಿಗಳಲ್ಲೊಬ್ಬರು. ಇವರ ವೈಯಕ್ತಿಕ ಹಾಗೂ ಸಾರ್ವಜನಿಕ ಸೇವೆಯ ಪ್ರೊಫೈಲ್ ಇಲ್ಲಿದೆ.
* ಹುಟ್ಟಿದ್ದು : 1958, ಆಗಸ್ಟ್ 5
* ಊರು: ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಆಲಹಳ್ಳಿ ಗ್ರಾಮ
* ಕುಟುಂಬ: ತಂದೆ ಹೆಚ್.ಎನ್.ಶ್ರೀಕಂಠ ಶೆಟ್ಟಿ, ಪತ್ನಿ ಗೀತಾ ಹಾಗೂ ಮಗ ಗಣೇಶ್ ಪ್ರಸಾದ್
* ವಿದ್ಯಾಭ್ಯಾಸ: ಮೈಸೂರು ವಿವಿಯಿಂದ ರಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
* ಮೊದಲ ಚುನಾವಣೆ: 1989ರಲ್ಲಿ (ಆಗ ಸೋತಿದ್ದರು)
* 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಚುನಾಯಿತರಾಗಿದ್ದರು.
* ಒಟ್ಟು 5 ಬಾರಿ ಗುಂಡ್ಲುಪೇಟೆ ಪ್ರತಿನಿಧಿಸಿದ್ದಾರೆ.
* ಕಾಂಗ್ರೆಸ್'ನಿಂದ 2 ಬಾರಿ ಶಾಸಕರು
* ಜನತಾದಳ, ಜೆಡಿಎಸ್ ಹಾಗೂ ಜೆಡಿಯುನಿಂದ ತಲಾ ಒಂದೊಂದು ಬಾರಿ ಶಾಸಕರಾಗಿದ್ದರು.
* ಮೂರು ಬಾರಿ ಸಚಿವ. ಕನ್ನಡ ಮತ್ತು ಸಂಸ್ಕೃತಿ ಸಚಿವ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ, ಹಾಗೂ ಸಹಕಾರಿ ಸಚಿವರು
