ಗೌರಿ ಹಂತಕರ ಸೆರೆ: ಭಗವಾನ್ ಪ್ರತಿಕ್ರಿಯೆ ಏನು?

news | Tuesday, June 12th, 2018
Suvarna Web Desk
Highlights

ಗೌರಿ ಲಂಕೇಶ್ ಹಂತಕರ ಬಂಧನ ಹಿನ್ನೆಲೆ

ರಾಜ್ಯ ಪೊಲೀಸ್ ಇಲಾಖೆಗೆ ಭಗವಾನ್ ಧನ್ಯವಾದ

ಕರ್ನಾಟಕ ಪೊಲೀಸ್ ದೇಶಕ್ಕೆ ಮಾದರಿ ಎಂದ ಭಗವಾನ್

ಕಲಬುರ್ಗಿ ಹಂತಕರ ಬಂಧನದ ವಿಶ್ವಾಸ 
 

ಬೆಂಗಳೂರು[ಜೂ.12]: ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಬಂಧನ ಹಿನ್ನೆಲೆಯಲ್ಲಿ ಪ್ರೋ.ಕೆ.ಎಸ್. ಭಗವಾನ್ ಪ್ರತಿಕ್ರಿಯೆ ನೀಡಿದ್ದು, ಎಸ್.ಐ.ಟಿ ಪೊಲೀಸರನ್ನು ಅಭಿನಂದಿಸಿದ್ದಾರೆ. ಈ ಕುರಿತು ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿರುವ ಭಗವಾನ್, ಕರ್ನಾಟಕ ಪೊಲೀಸ್ ದೇಶದಲ್ಲೇ ಮಾದರಿ ಪೊಲೀಸ್ ವ್ಯವಸ್ಥೆಯಾಗಿದೆ ಎಂದು ಹೊಗಳಿದ್ದಾರೆ. 

ಗೌರಿ ಹಂತಕರನ್ನು ಬಂಧಿಸುವ ಕುರಿತು ತಮಗೆ ವಿಶ್ವಾಸವಿತ್ತು. ಅದರಂತೆ ಇದೀಗ ಹಂತಕರ ಬಂಧನವಾಗಿದ್ದು, ಈ ಹಂತಕರ ಬೆನ್ನಿಗಿದ್ದ ಸಂಘಟನೆಗಳನ್ನು ನಾಶ ಮಾಡಿದರೆ ತಮಗೆ ಸಮಾಧಾನ ಸಿಗಲಿದೆ ಎಂದು ಭಗವಾನ್ ಹೇಳಿದ್ದಾರೆ.

ಇದೇ ವೇಳೆ ಗೌರಿ ಹಂತಕರಲ್ಲಿ ಒಬ್ಬನಾದ ಹೊಟ್ಟೆ ಮಂಜ ತಮ್ಮ ಮನೆಯ ಸುತ್ತುಮುತ್ತ ಹೆಚ್ಚು ತಿರುಗಾಡಿದ್ದು, ತಮಗೆ ಭದ್ರತೆ ಹೆಚ್ಚಿದ್ದ ಕಾರಣಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಭಗವಾನ್ ಹೇಳಿದ್ದಾರೆ. ತಮಗೆ ಭದ್ರತೆ ಒದಗಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿಯೂ ಭಗವಾನ್ ತಿಳಿಸಿದ್ದಾರೆ.

ಸದ್ಯ ಗೌರಿ ಹಂತಕರ ಬಂಧನವಾಗಿರುವುದರಿಂದ ದಾಬೋಲ್ಕರ್, ಪನ್ಸಾರೆ ಮತ್ತು ಪ್ರೋ.ಎಂ.ಎಂ ಕಲಬುರ್ಗಿ ಅವರ ಹಂತಕರ ಕುರಿತು ಸುಳಿವು ಸಿಗಬಹುದು ಎಂದು ಭಗವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments 0
Add Comment

  Related Posts

  Suresh Gowda Reaction about Viral Video

  video | Friday, April 13th, 2018

  Government honour sought for demised ex solder

  video | Monday, April 9th, 2018

  Jaggesh reaction about Controversy

  video | Saturday, April 7th, 2018

  HDK Reaction Janardhan Reddy Visit News

  video | Sunday, April 1st, 2018

  Suresh Gowda Reaction about Viral Video

  video | Friday, April 13th, 2018
  Sujatha NR