ಮೈಸೂರಿನಲ್ಲಿ ಸಂಭವಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಅಪಘಾತದ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ನಿರ್ಮಾಪಕ ಸಂದೇಶ್ ಸತ್ಯಾಸತ್ಯತೆ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, [ಸೆ.25]: ಮೈಸೂರಿನಲ್ಲಿ ಸಂಭವಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಅಪಘಾತದ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

Add Asianetnews Kannada as a Preferred SourcegooglePreferred

ಸ್ವತಃ ದರ್ಶನ್ ಅವರೇ ಕಾರ್ ಚಾಲನೆ ಮಾಡಿದ್ರಾ? ಅಥವಾ ಡ್ರೈವರ್ ಚಲಾಯಿಸುತ್ತಿದ್ರಾ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಅಪಘಾತ ವೇಳೆ ಯಾರು ಕಾರ್ ಚಾಲನೆ ಮಾಡುತ್ತಿದ್ರು ಎನ್ನುವುದೇ ಇನ್ನು ನಿಗೂಢವಾಗಿಯೇ ಉಳಿದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಸಂದೇಶ್, ರಾಯ್ ಅಂತೋನಿ ವೃತ್ತಿಯಲ್ಲಿ ಕಾರು ಚಾಲಕನಲ್ಲ. ಅವರು ದರ್ಶನ್‌ರ ಬಹು ವರ್ಷದ ಗೆಳೆಯ. ಅವರು ಸಹ ಅಂದು ದರ್ಶನ್ ಜೊತೆ ಪಾರ್ಟಿಯಲ್ಲಿದ್ದರು.

ದರ್ಶನ್ ಅವರ ರೆಗ್ಯೂಲರ್ ಡ್ರೈವರ್ ಲಕ್ಷಣ್ ಕಾರು ಚಾಲನೆ ಮಾಡುವುದು ಬೇಡ ಎಂದು ರಾಯ್ ಹೇಳಿದ್ದರು. ಈ ಹಿನ್ನಲೆಯಲ್ಲಿ ಲಕ್ಷಣ್ ಕಾರು ತೆಗೆಯದೆ ರಾಯ್ ಅಂತೋನಿ ಕಾರು ಓಡಿಸಿದರು ಎಂದು ಸಂದೇಶ್ ಸ್ಪಷ್ಟನೆ ನೀಡಿದ್ದಾರೆ.