ನಿನ್ನೆ ರಾತ್ರಿ ಪಾಟ್ನಾದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಮಮತಾ ವಿಮಾನದಲ್ಲಿ ಇಂಧನದ ಕೊರತೆಯಿದ್ದು, ಏರ್ಪೋರ್ಟ್ನಲ್ಲಿ ವಿಮಾನ ಲ್ಯಾಂಡಿಂಗ್ ಕೂಡಾ ವಿಳಂಬವಾಗಿತ್ತು. ವಿಮಾನವು ಸುಮಾರು ಅರ್ಧಗಂಟೆ ಏರ್ಪೋರ್ಟ್ನಲ್ಲೇ ಸುತ್ತು ಹೊಡೆದ ಬಳಿಕ ತುರ್ತು ಭೂಸ್ಪರ್ಶ ಮಾಡಲಾಗಿದೆ.
ನವದೆಹಲಿ (ಡಿ.01): ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ವಿಮಾನದ ಲ್ಯಾಂಡಿಂಗ್ ವಿಳಂಬವಾಗಿರುವ ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆಗೆ ಆದೇಶಿಸಿದೆ.
ನಿನ್ನೆ ರಾತ್ರಿ ಪಾಟ್ನಾದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಮಮತಾ ವಿಮಾನದಲ್ಲಿ ಇಂಧನದ ಕೊರತೆಯಿದ್ದು, ಏರ್ಪೋರ್ಟ್ನಲ್ಲಿ ವಿಮಾನ ಲ್ಯಾಂಡಿಂಗ್ ಕೂಡಾ ವಿಳಂಬವಾಗಿತ್ತು. ವಿಮಾನವು ಸುಮಾರು ಅರ್ಧಗಂಟೆ ಏರ್ಪೋರ್ಟ್ನಲ್ಲೇ ಸುತ್ತು ಹೊಡೆದ ಬಳಿಕ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಇಂದು ಬೆಳಗ್ಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ಸಂಸದ ಮಮತಾ ಸುದೀಪ್ ಬಂಧೋಪದ್ಯಾಯ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ, ಈ ಕುರಿತು ತನಿಖೆಗಾಗಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.