ಪರ್ಯಾಯವಾಗಿ ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಯಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದೆವು. ಅದಕ್ಕೆ ಸಂಘಟಕರು ಒಪ್ಪಿಕೊಳ್ಳಲಿಲ್ಲ. ಮುಂದಿನ ಬಾರಿ ಪರಿಸ್ಥಿತಿಗೆ ನೋಡಿಕೊಂಡು ಅವಕಾಶ ಕಲ್ಪಿಸಲಾಗುವುದು

ಬೆಂಗಳೂರು(ಜು.21):ವುಡನ್ ಫ್ಲೋರಿಂಗ್ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಾಧ್ಯವಾದರೆ ಮಾತ್ರ ಮುಂದಿನ ವರ್ಷ ‘ಪ್ರೊ ಕಬಡ್ಡಿ’ಗೆ ಅವಕಾಶ ಕಲ್ಪಿಸಲಾಗುವುದು. ಇಲ್ಲವಾದಲ್ಲಿ, ಬೇರೆಡೆ ವ್ಯವಸ್ಥೆ ಮಾಡುವುದಾಗಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು. ಮಹಿಳಾ ಬಾಸ್ಕೆಟ್‌ಬಾಲ್ ಟೂರ್ನಿ ಅಕ್ಟೋಬರ್‌ವರೆಗೂ ನಡೆಯುತ್ತಿರುವ ಕಾರಣ ಈ ವರ್ಷ ಪ್ರೊ ಕಬಡ್ಡಿಗೆ ಕ್ರೀಡಾಂಗಣ ನೀಡಲು ಸಾಧ್ಯವಾಗಿಲ್ಲ. ಪರ್ಯಾಯವಾಗಿ ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಯಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದೆವು. ಅದಕ್ಕೆ ಸಂಘಟಕರು ಒಪ್ಪಿಕೊಳ್ಳಲಿಲ್ಲ.

ಮುಂದಿನ ಬಾರಿ ಪರಿಸ್ಥಿತಿಗೆ ನೋಡಿಕೊಂಡು ಅವಕಾಶ ಕಲ್ಪಿಸಲಾಗುವುದು ಎಂದರು. ಕ್ರೀಡಾಂಗಣದಲ್ಲಿ ಈ ಹಿಂದೆ ಸಿಸಿಟೀವಿ ಕ್ಯಾಮೆರಾಗಳೇ ಕಳ್ಳತನವಾಗಿದ್ದವು. ಈ ಸಂಬಂಧ ನಿರ್ವಹಣೆ ಸಂಸ್ಥೆಗಳನ್ನೇ ಹೊಣೆಗಾರರನ್ನಾಗಿಸಿ ಪ್ರಕರಣ ದಾಖಲಿಸುವಂತೆಯೂ ಸೂಚನೆ ನೀಡಿದ್ದೇನೆ. ಕ್ರೀಡೆ ಎಂಬುದು ಕೇವಲ ಆಟವಲ್ಲ, ಶಿಸ್ತು ಮುಖ್ಯ. ರಕ್ಷಣೆ, ಭದ್ರತೆ, ಸೌಲಭ್ಯಕ್ಕೆ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.