ಹಜ್ ಯಾತ್ರೆಗೆ ಸರ್ಕಾರ ಸಬ್ಸಿಡಿ ರದ್ದುಪಡಿಸಬೇಕೆಂದು ಆಗ್ರಹ

First Published 23, Mar 2018, 1:34 PM IST
Pro Hindu Organisation Protest against Ligayat Separate Issue
Highlights

ಲಿಂಗಾಯತ ಧರ್ಮದ ಶಿಫಾರಸ್ಸು ಮಾಡಿದ ರಾಜ್ಯ ಸರ್ಕಾರದ ವಿರುದ್ಧ  ನಗರದ ಮಿನಿ ವಿಧಾನಸೌಧ ಮುಂದೆ ಹಿಂದೂ ಜನ ಜಾಗೃತಿ ಮತ್ತು ರಾಷ್ಟ್ರೀಯ ಹಿಂದೂ ಆಂದೋಲನ ಸಂಘಟನೆ ಪ್ರತಿಭಟನೆ ನಡೆಸಿವೆ. 

ಹುಬ್ಬಳ್ಳಿ (ಮಾ.23): ಲಿಂಗಾಯತ ಧರ್ಮದ ಶಿಫಾರಸ್ಸು ಮಾಡಿದ ರಾಜ್ಯ ಸರ್ಕಾರದ ವಿರುದ್ಧ  ನಗರದ ಮಿನಿ ವಿಧಾನಸೌಧ ಮುಂದೆ ಹಿಂದೂ ಜನ ಜಾಗೃತಿ ಮತ್ತು ರಾಷ್ಟ್ರೀಯ ಹಿಂದೂ ಆಂದೋಲನ ಸಂಘಟನೆ ಪ್ರತಿಭಟನೆ ನಡೆಸಿವೆ. 

ಲಿಂಗಾಯತ ಧರ್ಮದ ಶಿಫಾರಸ್ಸು ಈಗಲೇ ಸರಕಾರ ಕೈ ಬಿಡಬೇಕು. ಚುನಾವಣೆಗಾಗಿ ಹಿಂದೂ ಧರ್ಮ ಒಡೆಯಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಸ್ವತಂತ್ರ ಧರ್ಮ ಶಿಫಾರಸ್ಸು ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ. 

ರೋಹಿಂಗ್ಯಾ ಮುಸ್ಮಾನರಿಗೆ ಕಾಶ್ಮೀರದಲ್ಲಿ ಆಶ್ರಯ ನೀಡಲಾಗುತ್ತಿದೆ. ಅದನ್ನು ತಕ್ಷಣ ರದ್ದುಪಡಿಸಬೇಕು. ಹಜ್ ಯಾತ್ರಿಗೆ ಸರ್ಕಾರ ನೀಡುವ ರಿಯಾಯಿತಿಯನ್ನು ರದ್ದುಪಡಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.  ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿ ಒತ್ತಾಯಪಡಿಸಿದ್ದಾರೆ. 

loader